ಮುರುಡೇಶ್ವರ: ಹೋಟೆಲ್ ಒಂದರ ಎದುರಿನ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಮುರುಡೇಶ್ವರ ಸಮೀಪ ನಡೆದಿದೆ.

ಸೆಪ್ಟೆಂಬರ್ 7ರಂದು ಯಾದಗಿರಿಯಿಂದ ಪ್ರವಾಸಕ್ಕೆ ಹೊರಟ ತಂಡ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ,ಉಡುಪಿ ಕಡೆಗಳಲ್ಲಿ ಪ್ರವಾಸ ಮುಗಿಸಿ ರಾತ್ರಿ ಮುರುಡೇಶ್ವರಕ್ಕೆ ಬರುತ್ತಿದ್ದಾಗ ರಾತ್ರಿ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

RELATED ARTICLES  ಉತ್ತರ ಕನ್ನಡದಲ್ಲಿ ಇಬ್ಬರಿಗೆ ಇಂದು ಕೊರೋನಾ ದೃಢ

ಘಟನೆಯಲ್ಲಿ ಗಾಯಗೊಂಡ ಕಾರಿನ ಚಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳ ದಾಟಿ ಬಸ್ತಿ ಮಾರ್ಗವಾಗಿ ಒಲಗ ಮಂಟಪ ದಾಟಿ ಮುರುಡೇಶ್ವರ ದೇವಸ್ತಾನದ ಕಡೆ ಹೋಗುತ್ತಿರುವಾಗ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಚಾಲಕ ಮಹೇಶ ಈತನು ಚಾಲಾಯಿಸುತ್ತಿದ್ದ ಕಾರನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಾಲಾಯಿಸಿಕೊಂಡು ಬಂದು ಮುರುಡೇಶ್ವರ ಇಂದ್ರಪ್ರಸ್ತ ಹೋಟೆಲ್ ಇದುರಿನ ಸಿಮೆಂಟ್ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

RELATED ARTICLES  ಮನೆ,ಮನೆಯಲ್ಲಿ ಕನ್ನಡ ರಕ್ಷಿಸುವ ಕೆಲಸವಾಗಲಿ: ಜಿ.ಎಲ್.ಹೆಗಡೆ