ಹೊನ್ನಾವರ : ಅದ್ಯಾವುದೋ ಕಾರಣಕ್ಕೆ ಮುನಿಸಿಕೊಂಡ ಪ್ರೇಯಸಿ ತನ್ನ ಜೊತೆ ಮಾತಾಡಿಲ್ಲ ಎಂದು ಸಿಟ್ಟಾದ ಪ್ರೇಮಿಯೊಬ್ಬ ಶರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ವರದಿಯಾಗಿದೆ.

ಈ ಘಟನೆಯಿಂದಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿದ್ದು, ಹಬ್ಬದ ಸಂತೋಷದಲ್ಲಿದ್ದ ಜನರಿಗೆ ಈ ಘಟನೆ ಬೆಚ್ಚಿಬೀಳಿಸಿದೆ. ಈ ಘಟನೆ ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ.

RELATED ARTICLES  ಕೆಸರು ಗದ್ದೆಯಂತಾಗಿದೆ ರಸ್ತೆ! ಜನತೆಯ ಗೋಳು ಕೇಳಿಯೂ ಕೇಳದಂತಿದ್ದಾರಾ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು?

ತಾಲೂಕಿನ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯ ಜೊತೆ ಕಿರಿಕ್ ಮಾಡಿಕೊಂಡು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ
ಮುಂದಾಗಿದ್ದಾನೆ ಈ ಸಮಯದಲ್ಲಿ ಅಲ್ಲಿಯೇ ಇದ್ದ ಮೀನುಗಾರರು ತಕ್ಷಣ ರಕ್ಷಣೆಗೆ ಧಾವಿಸಿ ಯುವಕನನ್ನು ಬದುಕಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಸ್ವಚ್ಛತೆ ಮಾಡಿದಲ್ಲೇ ಕಸ ಎಸೆಯುತ್ತಿರುವ ನಾಗರಿಕರು - ಯುವಾ ಬ್ರಿಗೇಡ್ ಕಳವಳ

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲವಾದರೂ ಪ್ರೀತಿ ಪ್ರೇಮ ಎಂದು ಕ್ಷುಲ್ಲಕ ಕಾರಣಗಳಿಗೆ ಅಮೂಲ್ಯವಾದ ಬದುಕನ್ನು ಅಂತ್ಯಮಾಡಿಕೊಳ್ಳಲು ಮುಂದಾಗುವ, ಕೋಪದ ಕೈಯಲ್ಲಿ ಬುದ್ಧಿಯನ್ನು ಕೊಟ್ಟು ಅವಿವೇಕಿಗಳಂತೆ ವರ್ತಿಸುವ ಯುವಕ ಯುವತಿಯರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.