ಕಾರವಾರ: ಕೊರೋನಾ ಕಾಲಘಟ್ಟದಲ್ಲಿ ಜನತೆಯ ಓಡಾಟ ಕಡಿಮೆ ಇತ್ತು. ಇದೀಗ ಕೊರೋನಾ ಕರಿನೆರಳು ಸರಿಯುತ್ತಿದ್ದು ಜನರು ಪ್ರವಾಸ ಹಾಗೂ ವಿವಿಧ ಚಟುವಟಿಕೆಗಳನ್ನು ಪುನಃ ಆರಂಭಿಸಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಕಡಲತೀರಕ್ಕೆ ಪ್ರವಾಸಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಎಲ್ಲಾ ಎಚ್ಚರಿಕೆಯನ್ನು ಮೀರಿ ಕಡಲತೀರಕ್ಕೆ ಇಳಿದು ಪ್ರಾಣಕಳೆದುಕೊಳ್ಳುತ್ತಿರುವುದು ಆಡಳಿತ ವರ್ಗದ ಜನರಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ ಕುಮಟಾ ತಹಶೀಲ್ದಾರ್ ವಿವೇಕ ಶೇಣ್ಣಿ ನಿಷೇದಾಜ್ಞೆ ಜಾರಿಗೊಳಿಸಿ, ಓಂಬೀಚ್, ಕುಡ್ಲೆ ಬೀಚ್ , ಹನಿಮೂನ್ ಬೀಚ್,ಹಾಫ್ ಮೂನ್ ಬೀಚ್ ಗೆ ಅಕ್ಟೋಬರ್ 9 ರವರೆಗೆ ತೆರಳುವುದು ನಿಷೇಧ ಮಾಡಿದ್ದಾರೆ.
ಬಾಡ, ಗುಡೆಅಂಗಡಿ, ಕಾಗಾಲ, ಅಘನಾಶಿನಿ, ಧಾರೇಶ್ವರ, ವಿವಿಧ ಕಡಲ ತೀರದಲ್ಲಿ ಪ್ರವಾಸಕ್ಕೆ ಬಂದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಪ್ರವಾಸಕ್ಕೆ ಬರುವವರು ಈ ಸೂಚನೆಯನ್ನು ಗಮನಿಸಬೇಕು ಹಾಗೂ ಸಾರ್ವಜನಿಕರು ಈ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರಬೇಕೆಂದು ವಿವರ ತಿಳಿಸಲಾಗಿದೆ.