ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರನ್ನಾಗಿ ಬ್ಲಾಕ್ ಕಿಸಾನ್ ಸೆಲ್ ಅಧ್ಯಕ್ಷರಾದ ಸಚಿನ್ ಮಿಗಾರವರು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ
ಕರ್ನಾಟಕ ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರೂ ಮತ್ತು ರೈತ ನಾಯಕರೂ ಆದ ಸಚಿನ್ ಮೀಗಾರವರ ಆದೇಶದಂತೆ ತಮಗೆ ನೀಡುತ್ತಿರುವ ಈ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಮತ್ತು ಕಿಸಾನ್ ಘಟಕದ ಮೂಲಕ ರೈತರನ್ನು ಪಕ್ಷದಲ್ಲಿ ಸಂಘಟಿಸಲು ಶ್ರಮಿಸಬೇಕು ಮತ್ತು ಈ ನಿಟ್ಟಿನಲ್ಲಿ ಕ್ಷೇತ್ರದ ಮುಖಂಡರುಗಳ ಸಹಕಾರದೊಂದಿಗೆ ಜಿಲ್ಲಾ ಮತ್ತು ರಾಜ್ಯ ಕಿಸಾನ್ ಕಾಂಗ್ರೆಸ್ ನಿರ್ದೇಶನದಂತೆ ತಾಲೂಕು ಮಟ್ಟದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸೂಚಿಸಲಾಗಿದ್ದು ಈ ಕುರಿತು ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರ ವಿವರ ಈ ಕೆಳಗಿನಂತಿದೆ.
ಹಳಿಯಾಳ – ಸಂದೇಶ ಸುಭಾಷ ಬಾಂದುರ್ಗಿ.
ಜೋಯಿಡಾ – ಪುರುಷೋತ್ತಮ (ಮಂಗೇಶ) ಕಾಮತ್.
ದಾಂಡೇಲಿ – ಎಚ್ ಬಿ ಪರಶುರಾಮ.
ಅಂಕೋಲಾ – ಮದೇವ ಬೀರು ಗೌಡ.
ಕುಮಟಾ – ಹರಿಶ್ಚಂದ್ರ ಕೃಷ್ಣ ಭಟ್ಟ.
ಹೊನ್ನಾವರ – ಹರಿಶ್ಚಂದ್ರ ಗಣಪತಿ ನಾಯ್ಕ.
ಭಟ್ಕಳ – ನಾರಾಯಣ ಜಟ್ಟಾ ನಾಯ್ಕ.
ಮಂಕಿ – ಅಣ್ಣಪ್ಪ ಹನುಮಂತ ನಾಯ್ಕ.
ಶಿರಸಿ – ಪ್ರವೀಣ ಹೆಗಡೆ.
ಸಿದ್ದಾಪುರ – ಪಾಂಡುರಂಗ ಗಣಪತಿ ನಾಯ್ಕ.
ಯಲ್ಲಾಪುರ – ಅಣ್ಣಪ್ಪ ಡಿ ನಾಯ್ಕ.
ಮುಂಡಗೋಡ – ಪ್ರದೀಪಗೌಡ ದ್ಯಾಮನಗೌಡ ಶಿವನಗೌಡರ್.
ಬನವಾಸಿ – ಭದ್ರಗೌಡ ಬಿ ಕರಡೇರ್.
ಕಾರವಾರ – ಸಂತೋಷ ಚಂದ್ರಕಾಂತ ನಾಯ್ಕ.