ಅಂಕೋಲಾ : ಎರಡನೇ ಅಲೆಯ ಕೊರೋನಾ ಆರ್ಭಟದ ನಂತರ ಮೂರನೇ ಅಲೆಯ ಮುನ್ನೆಚ್ಚರಿಕೆ ಎಲ್ಲೆಡೆ ನಡೆದಿದೆ. ಮೂರನೇ ಅಲೆ ಬರದಂತೆ ತಡೆಯಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದು ಕೆಲವು ಕಠಿಣ ಕ್ರಮಕ್ಕೂ ಮುಂದಾಗುತ್ತಿದ್ದಾರೆ. ಇದೀಗ ವಾರದ ಸಂತೆಯನ್ನು ಬಂದ್ ಮಾಡಿ ಪುರಸಭಾ ಮುಖ್ಯಾಧಿಕಾರಿಗಳು ಕಾರವಾರದಲ್ಲಿ ಆದೇಶ ಹೊರಡಿಸಿದ ಬಗ್ಗೆ ವರದಿಯಾಗಿದೆ.

ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರವಾರ ಪುರಸಭೆ ವ್ಯಾಪ್ತಿಯಲ್ಲಿ ರವಿವಾರದ ವಾರದ ಸಂತೆ ಇರುವುದಿಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ತಿಳಿಸಿದ್ದಾರೆ. ಜೊತೆಗೆ ಪಟ್ಟಣದಲ್ಲಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸಾಮಾಜಿಕ ಅಂತರ ಪಾಡಿಕೊಳ್ಳಬೇಕು ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಮಣಿದ ಪೌರಸ್ ಫುಡ್ಸ್ ಕಂಪನಿ : ಸಾಂಘಿಕ ಹೋರಾಟಕ್ಕೆ ಸಿಕ್ಕ ಜಯ ಎಂದ ನ್ಯಾಯವಾದಿ ನಾಗರಾಜ ನಾಯಕ.

ಕೋವಿಡ್ 19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ರವಿವಾರ ವಾರದ ಸಂತೆ ರದ್ದುಪಡಿಸಲಾಗಿದೆ. ಎಲ್ಲಾ ವ್ಯಾಪಾರಸ್ಥರು ಎಂ.ಜಿ. ರಸ್ತೆಯ ಬಳಿ ಕುಳಿತು ಮಾರಾಟ ಮಾಡುತ್ತಿರುವುದರಿಂದ ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದರಿಂದ ಮುಂದಿನ ಆದೇಶದವರೆಗೆ ರವಿವಾರದ ಸಂತೆಯನ್ನು ರದ್ದುಪಡಿಸಲಾಗಿದೆ. ಸಂತೆ ವ್ಯಾಪಾರದ ಉದ್ದೇಶದಿಂದ ಹೊರ ಊರಿನಿಂದ ವ್ಯಾಪಾರಸ್ಥರು ನಗರಕ್ಕೆ ಬರಬಾರದು ಎಂದು ಕಾರವಾರ ಪುರಸಭೆಯ ಪೌರಾಯುಕ್ತ ಆರ್‌.ಪಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ನವರಾತ್ರಿ ವಿಶೇಷ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ 'ಸಪ್ತ ಯಕ್ಷ ಸೌರಭ ಕಾರ್ಯಕ್ರಮ'.

ಮೂರನೇ ಅಲೆ ಬರದಂತೆ ತಡೆಯುವುದು ಸಾಮಾನ್ಯ ಸಾರ್ವಜನಿಕರ ಜವಾಬ್ದಾರಿ ಆಗಿದ್ದು, ಈ ಬಗ್ಗೆ ಅಗತ್ಯ ಎಚ್ಚರಿಕೆ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರು ಈ ನಿಯಮ ಪಾಲಿಸಬೇಕೆಂದು ಮಾತುಗಳು ಕೆಲವೆಡೆ ಕೇಳಿಬರುತ್ತಿದ್ದರೆ. ಇನ್ನೂ ಕೆಲವೆಡೆ ವ್ಯಾಪಾರಿಗಳು ಹಾಗೂ ಜನರಿಗೆ ಸಂತೆ ಬಂದ್ ಮಾಡಿದರೆ ಸಮಸ್ಯೆ ಆಗುವುದು ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.