ಕುಮಟಾ : ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಗಣಪತಿ ಮೂರ್ತಿಗೆ ತೊಡಿಸಿದ್ದ ಚಿನ್ನದ ಉಂಗುರ ಹಾಗೂ ಬೆಳ್ಳಿಯ ಸರಪಳಿ ಸಮೇತ ವಿಸರ್ಜನೆ ಮಾಡಿ ತದ ನಂತರ ಆ ಬಗ್ಗೆ ಗಮನ ವಹಿಸಿದ ಉತ್ಸವ ಸಮಿತಿಯವರ ಕೋರಿಕೆಯ ಮೇರೆಗೆ ಅದನ್ನು ಪುನಃ ಹುಡುಕಿದ ತೆಗೆದ ಘಟನೆ ವರದಿಯಾಗಿದೆ.

ಮಳಲಿ ಗೋನೆಹಳ್ಳಿಯ ಸಾರ್ವಜನಿಕ ಗಣಪತಿ ಮೂರ್ತಿ ವಿಸರ್ಜನೆ ಮಾಡುವ ಸಮಯದಲ್ಲಿ, ಅಚಾತುರ್ಯದಿಂದ ಗಣಪತಿಗೆ ತೊಡಿಸಿದ್ದ ಚಿನ್ನದ ಉಂಗುರ ಹಾಗೂ ಬೆಳ್ಳಿಯ ಸರಪಳಿ ಸಮೇತ ವಿಸರ್ಜನೆ ಮಾಡಲಾಗಿತ್ತು.

RELATED ARTICLES  ಕಷ್ಟ ಕಾಲದಲ್ಲಿ ನೆರವಿನ ಹಸ್ತ ಚಾಚಿದ ಆರ್.ವಿ.ದೇಶಪಾಂಡೆಯವರಿಗೆ ಅಭಿನಂದನೆ

ದೇವರ ಭಾವಿ ಮೂಲದ ಯುವ ಉದ್ಯಮಿ ಹಾಗೂ ಪರಿಸರ ಪ್ರೇಮಿ ಶ್ರೀ ವಿನಯ್ ನಾಯಕ ಹಾಗೂ ತಂಡದವರು ಕೆರೆಯಲ್ಲಿ ಮುಳುಗಿ ಆಭರಣಗಳನ್ನು ಹುಡುಕಿ ಕೊಟ್ಟಿದ್ದಾರೆ.

RELATED ARTICLES  ಮಾಜಿ ಶಾಸಕ ಉಮೇಶ ಭಟ್ಟ ನಿಧನ : ಅಂತಿಮ ದರ್ಶನ ಪಡೆದ ಸ್ಪೀಕರ್.

ವಿನಯ್ ನಾಯಕ ಹಾಗೂ ತಂಡದವರ ಈ ಕಾರ್ಯಕ್ಕೆ ಮಳಲಿ ಗೊನೆಹಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ರಾಘವ ನಾಯಕ,ಶ್ರೀ ರೋಹಿತ್ ನಾಯಕ, ಶ್ರೀ ಅಕ್ಷಯ ನಾಯಕ ಹಾಗೂ ತೊರ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಂಜುನಾಥ ನಾಯಕ ದೇವರಭಾವಿ ಅವರು ಶ್ಲಾಘಿಸಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ.