ಕಾರವಾರ: ಉತ್ತರಕನ್ನಡ‌ ಜಿಲ್ಲೆಯಲ್ಲಿ‌ ನಾಳೆ 12680 ಕೋವಿಶೀಲ್ಡ್ ಮತ್ತು 4690 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ.

ಕುಮಟಾ ತಾಲೂಕಿನಲ್ಲಿ ಎಲ್ಲೆಲ್ಲಿ?

ಕುಮಟಾ: ತಾಲೂಕಿನಲ್ಲಿ‌ ನಾಳೆ‌‌ ಒಟ್ಟು 1210 ಕೋವಿಶೀಲ್ಡ್ ಲಸಿಕೆ ಮತ್ತು 440 ಕೋವ್ಯಾಕ್ಸಿನ್ ಡೋಸ್ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ಆಸ್ಪತ್ರೆ ಕುಮಟಾ 220 ಡೋಸ್, ಪ್ರಾಥಮಿಕ ಆರೋಗ್ಯ ಕೇಂದ್ರ ಗೋಕರ್ಣ, ಪ್ರಾಥಮಿಕ ಆರೋಗ್ಯ ಕೇಂದ್ರ ಬಂಕಿಕೊಡ್ಲು 100, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿ 40, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಡ್ಕಣಿ 50, ಹಿರಿಯ ಪ್ರಾಥಮಿಕ ಗಂಡುಮಕ್ಕಳ ಶಾಲೆ ಹೆಗಡೆ 100, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಗಾಲ್ 60, ಪ್ರಾಥಮಿಕ ಶಾಲೆ ಮೊಸಳೆಸಾಲ 100, ಹಿ ಪ್ರಾ ಶಾಲೆ ಹುಬ್ಬಣಗೇರಿ 100, ಪ್ರಾ ಆ ಕೇಂದ್ರ ಕತಗಾಲ್, 100, ಹರ್ಕಡೆ 150, ಪ್ರಾ ಆ ಕೇಂದ್ರ ಸಂತೇಗುಳಿ 90 ಡೋಸ್ ಕೋವಿಶೀಲ್ಡ್ ಲಭ್ಯವಿದೆ. ಅಲ್ಲದೆ ಸಾರ್ವಜನಿಕ ಆಸ್ಪತ್ರೆ ಕುಮಟಾದಲ್ಲಿ 440 ಡೋಸ್ ಕೋವ್ಯಾಕ್ಸಿನ್ ಲಸಿಕೆ‌ ಇದೆ.

RELATED ARTICLES  ಗುಟ್ಕಾ ಹಗರಣ: ತಮಿಳು ನಾಡಿನಲ್ಲಿ 40 ಕಡೆ ಸಿಬಿಐ ದಾಳಿ.

ಅಂಕೋಲಾದಲ್ಲಿ ಎಲ್ಲಿ?

ಅಂಕೋಲಾ : ತಾಲೂಕಿನಲ್ಲಿ ನಾಳೆ ತಾಲೂಕಾ ಆಸ್ಪತ್ರೆ (100), ಅವರ್ಸಾ (150), ಅಂಬಾರ ಕೊಡ್ಲ (160) ಸೇರಿ ತಾಲೂಕಿನಲ್ಲಿ ಒಟ್ಟೂ 510 ಡೋಸ್ ಕೊವಿಡ್ ಲಸಿಕೆಗಳು ಸೆ.13 ರ ಸೋಮವಾರ ಲಭ್ಯವಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

RELATED ARTICLES  ಮೆಡಿಕಲ್ ಲ್ಯಾಬ್-ವೈದ್ಯರ ಒಳಒಪ್ಪಂದ; ಕೋಟ್ಯಂತರ ರೂ ಹಗರಣ ಪತ್ತೆ

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ ತಾಲೂಕು ವ್ಯಾಪ್ತಿಯಲ್ಲಿ ಹಳದೀಪುರ,ಖರ್ವಾ, ಗೇರುಸೊಪ್ಪಾ,ಸಂಶಿ, ಮಂಕಿ, ಹೊನ್ನಾವರ ಪಟ್ಟಣದಲ್ಲಿ ಲಸಿಕಾಕರಣ ನಡೆಯಲಿದ್ದು ಒಟ್ಟೂ 1250 ಕೊವೀಶೀಲ್ಡ್ ಹಾಗೂ 460 ಕೋವ್ಯಾಕ್ಸೀನ್ ಲಭ್ಯವಿದೆ.