ಕಾರವಾರ : ಅನಾರೋಗ್ಯಪೀಡಿತ ವ್ಯಕ್ತಿಯೊಬ್ಬರನ್ನು ಕಾರವಾರದ ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಕಾರವಾರ ನಗರದ ಬಿಣಗಾದಲ್ಲಿ ಅಪಘಾತ ಸಂಭವಿಸಿ ರೋಗಿ ಮೃತಪಟ್ಟ ಘಟನೆ ನಡೆಸಿದೆ.

ಪ್ರಶಾಂತ ಬೋರಗಾಂವಕರ್‌ ಎನ್ನುವ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಕಾರವಾರದ ಜಿಲ್ಲಾಸ್ಪತ್ರೆಯಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಸಮಸ್ಯೆ ಹೆಚ್ಚಾಗಿದ್ದರಿಂದ ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಲು ಅಂಬುಲೆನ್ಸ್ ಮೂಲಕ ಒಯ್ಯುತ್ತಿರುವ ಸಂದರ್ಭದಲ್ಲಿ ಬಿಣಗಾದ ಪೆಟ್ರೋಲ್ ಬಂಕ್ ಬಳಿ ಅಂಬುಲೆನ್ಸ್ ಹಾಗೂ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ.

RELATED ARTICLES  ಮಂಗಲವಾಯಿತು ಸಪರ್ಯಾ-ಗೋಪಾಷ್ಟಮೀ ಮಹೋತ್ಸವ.

ಇದರಿಂದ ಅಂಬುಲೆನ್ಸ್‌ನಲ್ಲಿದ್ದ ಪ್ರಶಾಂತ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದು ತನಿಖೆಯ ನಂತರ ಪೂರ್ಣ ವಿವರ ಹೊರಬರಬೇಕಿದೆ.

RELATED ARTICLES  ಗ್ರಾಹಕರನ್ನು ಸುಲಿಗೆ ಮಾಡುವ ಹೊಟೆಲ್ಗಳು.