ಅಂಕೋಲಾ: ಗಣೇಶನ ವಿಗ್ರಹ ವಿಸರ್ಜನೆ ವೇಳೆ ಹೊಳೆಯ ನೀರಲ್ಲಿ ಮುಳುಗಿದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಬೆಳಸೆಯ ತೆಂಕನಾಡಿಯಲ್ಲಿ ನಡೆದಿದೆ.

ಪ್ರಕಾಶ ವೆಂಕಪ್ಪ ಗೌಡ (42) ಮೃತ ವ್ಯಕ್ತಿಯಾಗಿದ್ದು ಈತ ಬೆಳಸೆ ತೆಂಕನಾಡಿನ ನಿವಾಸಿಯಾಗಿದ್ದಾನೆ. ಶನಿವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಮನೆ ಮನೆಯ ಗಣಪತಿ ವಿಗ್ರಹಗಳ ವಿಸರ್ಜನೆ ಮಾಡುವಾಗ ಹಳ್ಳಕ್ಕೆ ಇಳಿದವನು ಮತ್ತೆ ವಾಪಸ್ ಬಂದಿರಲಿಲ್ಲ.

RELATED ARTICLES  ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ ಖಂಡಿಸಿ ಮನವಿ

ರವಿವಾರ ಘಟನಾ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಚಂದೂಮಠದ ಕಲ್ಲಮಟ ಬಳಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಸಿದ್ದಾಪುರದಲ್ಲಿ ನಡೆಯಿತು ಗಣ ವೇಷಧಾರಿಗಳಿಂದ ಆಕರ್ಷಕ ಪಥಸಂಚಲನ