ಗೋಕರ್ಣ: ಹೃದಯಾಘಾತದಿಂದ ವೈದ್ಯಕೀಯ ಪದವಿ ವಿದ್ಯಾರ್ಥಿ ಮೃತಪಟ್ಟ ಘಟನೆ ತಾಲೂಕಿನ ಗೋಕರ್ಣದಲ್ಲಿ ಸೋಮವಾರ ಸಂಜೆ ನಡೆದಿದೆ.ಹುಬ್ಬಳ್ಳಿ ಮೂಲದ ಅಭಯ (30) ಮೃತ ವಿದ್ಯಾರ್ಥಿ. ಈತ ಗೋಕರ್ಣಕ್ಕೆ ಪ್ರವಾಸಕ್ಕೆಂದು ಗೆಳೆಯರ ಜತೆ ಆಗಮಿಸಿದ್ದನು. ಈ ವೇಳೆ ಹೃದಯಾಘಾತವಾಗಿದ್ದು, ತಕ್ಷಣ ಗೋಕರ್ಣ

RELATED ARTICLES  ಹಕ್ಕು ಪಡೆಯುವುದೂ ಮತದಾರನ ಕರ್ತವ್ಯ: ಸಿಇಒ ಎಲ್. ಚಂದ್ರಶೇಖರ

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.ಕಾರವಾರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಶವ ಸಾಗಿಸಲಾಗಿದ್ದು, ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಸಂತೆಗುಳಿ ಪ್ರೌಢ ಶಾಲೆ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕರು.