ಭಟ್ಕಳ: ಮುರ್ಡೇಶ್ವರದ ಬಸ್ತಿಯ ಬಳಿ ರೈಲು ಹಳಿಯ ಮೇಲೆ ವ್ಯಕ್ತಿಯೋರ್ವರು ಮೃತ ಪಟ್ಟಿದ್ದು ರೈಲು ಬಡಿದು ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ.

ಮೃತರನ್ನು ಬಸ್ತಿಯ ಬಾಕಡರಕೇರಿ ನಿವಾಸಿ ನಾರಾಯಣ ಮಾರಿ ಬಾಕಡ ಎಂದು ಗುರುತಿಸಲಾಗಿದೆ. ಇವರು ಸೆ.12ರಂದು ಬೆಳಿಗ್ಗೆ ತಮ್ಮ ಮನೆಯಿಂದ ಬಸ್ತಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. 8.30ರಿಂದ 10 ಗಂಟೆಯ ನಡುವೆ ಯಾವುದೋ ರೈಲು ಬಡಿದು ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಆತನ ಅಳಿಯ ಮಾದೇವ ಮಂಜುನಾಥ ಬಾಕಡ್ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES  ಭಟ್ಕಳ ಕ.ಸಾ.ಪ. ಘಟಕದ ನೂತನ ಅಧ್ಯಕ್ಷರಿಗೆ ಅಧಿಕಾರ ನೀಡಿದ ಜಿಲ್ಲಾಧ್ಯಕ್ಷ ಕರ್ಕಿಕೋಡಿ

ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ. ಅಚಾನಕ್ಕಾಗಿ ಘಟನೆ ಸಂಭವಿಸಿದೆಯೋ ಅಥವಾ ಇನ್ನು ಯಾವ ಕಾರಣದಿಂದ ಘಟನೆ ನಡೆದಿದೆ ಎಂಬ ಬಗ್ಗೆ ಪೊಲೀಸ್ ತನಿಖೆಯ ನಂತರವಷ್ಟೇ ಪೂರ್ಣ ಮಾಹಿತಿ ತಿಳಿದುಬರಬೇಕಿದೆ.

RELATED ARTICLES  ಆರ್.ಕೆ.ಬಾಲಚಂದ್ರ ಅವರಿಗೆ ಪ್ರತಿಷ್ಟಿತ ಪ್ರೊ.ಎಚ್ ಎಸ್ ಕೆ ಶತಮಾನೋತ್ಸವ ಪ್ರಶಸ್ತಿ