ಕಾರವಾರ: ಕಾರು ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬಳು ಗಾಯಗೊಂಡಿರುವ ಘಟನೆ ನಗರದ ಶಿವಾಜಿ ಸರ್ಕಲ್ ಬಳಿ ನಡೆದಿದೆ. ಇಲ್ಲಿನ ಗ್ರಿನ್ ಸ್ಟ್ರೀಟ್ ರಸ್ತೆಯ ಮೂಲಕ ಸಂಚರಿಸುತ್ತಿರುವ ಸಂದರ್ಭದಲ್ಲಿ ಗೋವಾ ಕಡೆಯಿಂದ ಬರುತ್ತಿರುವ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

RELATED ARTICLES  ಹಾಲಕ್ಕಿ ಬಳಗದ ಟೂರ್ನಾಮೆಂಟ್ ಸಂಪನ್ನ : ಸಂಘಟಕರ ಬಗ್ಗೆ ಮೆಚ್ಚುಗೆ.

ಅಪಘಾತದ ರಭಸಕ್ಕೆ ಸ್ಕೂಟಿಯಲ್ಲಿದ್ದ ಮಹಿಳೆ ರಸ್ತೆ‌ ಮೇಲೆಯೇ ಉರುಳಿ ಬಿದ್ದಿದ್ದಾಳೆ. ಈ ವೇಳೆ ಮಹಿಳೆ ಗಾಯಗೊಂಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

RELATED ARTICLES  ಚಂಡಮಾರುತದಿಂದ ಹಾನಿಗೊಳಗಾದ ಕ್ಷೇತ್ರಕ್ಕೆ ಕಂದಾಯ ಸಚಿವರ ಭೇಟಿ

ರಸ್ತೆ ಅವಘಡಗಳ ಸಂಖ್ಯೆ ಹೆಚ್ಚುತ್ತಿದ್ದು, ಜನತೆ ಸಾಕಷ್ಟು ಜಾಗರೂಕತೆಯಿಂದ ವಾಹನ ಚಲಾಯಿಸುವ ಅಗತ್ಯತೆ ಇದೆ ಎಂದು ಅಧಿಕಾರಿಗಳು ಪದೇ ಪದೇ ವಿನಂತಿಸುತ್ತಿದ್ದಾರೆ. ಜೊತೆಗೆ ಖಡ್ಡಾಯವಾಗಿ ರಸ್ತೆ ಸಂಚಾರದ ನಿಯಮಗಳ ಪಾಲನೆಯೂ ಆಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.