ಕುಮಟಾ : ಚಂದಾವರ ಗ್ರಾಮದ ಶ್ರೀ ಹನುಮಂತ ದೇವರ ಉತ್ಸವದ ಪ್ರಯುಕ್ತ ಚಂದಾವರ ವೃತ್ತದಲ್ಲಿ ದಿನಾಂಕ. 06-12-2018 ರಂದು ಹನುಮಂತ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಹನುಮಂತ ದೇವರ ಮೂರ್ತಿ ಪ್ರತಿಷ್ಟಾಪಿಸಿದ ಕಾರ್ಯಕರ್ತರ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ.445 /2018 ಕಲಂ 290 ಐ.ಪಿ.ಸಿ ಮತ್ತು ಕಲಂ 3 ಕರ್ನಾಟಕ ಓಪನ್ ಪ್ಲೇಸಸ್ ( ಪ್ರಿವೆನ್ಷನ್ ಆಫ್ ಡಿಸ್ ಫಿಗರ್ ಮೆಂಟ್ ) ಆ್ಯಕ್ಟ್ ರೀತ್ಯ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಈ ಪ್ರಕರಣವನ್ನು ಹಿಂಪಡೆಯುವ ಬಗ್ಗೆ ಶಾಸಕ ದಿನಕರ ಶೆಟ್ಟಿಯವರು ಪ್ರಯತ್ನ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಈ ಹಿಂದಿನಿಂದಲೂ ಅಮಾಯಕ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆಯಬೇಕು ಎಂಬ ಒತ್ತಡ ಇತ್ತಾದರೂ ಇನ್ನೂ ವರೆಗೆ ಈ ವಿಷಯ ಯಾವುದೇ ಮುನ್ನೆಲೆಗೆ ಬಂದಿರಲಿಲ್ಲ. ಇದೀಗ ಶಾಸಕರೇ ಈ ಬಗ್ಗೆ ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ಬಗ್ಗೆ ಗೃಹಸಚಿವರು ಸಕಾರಾತ್ಮಕ ಧೋರಣೆ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.