ಮೈಸೂರು: ದಸರಾ ಪ್ರಯುಕ್ತ ಕುಶಲತೋಪು ತಾಲೀಮು ನಡೆಸುತ್ತಿರುವ ಆನೆಗಳು ಕುಶಲತೋಪು ಸಿಡಿದ ಸದ್ದಿಗೆ ಹೆದರಿ ವಿಚಲಿತವಾದ ಘಟನೆ ನಡೆಯಿತು.

ಅಂಬಾವಿಲಸ ಅರಮನೆಯ ಸಮೀಪ ಮಾರಮ್ಮ ದೇವಾಲಯ ಆವರಣದಲ್ಲಿ ಆನೆಗಳಿಗೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಯಿತು. ಈ ವೇಳೆ ಸಿಡಿಮದ್ದಿಗೆ ಬೆದರಿದ ಕಾವೇರಿ , ಭೀಮಾ, ಗೋಪಿ ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡಿದವು. ಈ ವೇಳೆ ಮಾವುತರು ಆನೆಗಳ ನಿಯಂತ್ರಿಸಿ ಹತೋಟಿಗೆ ತರಲು ಸಾಹಸ ನಡೆಸಿದರು. ಈ ವೇಳೆ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರ ವಾಹನವೊಂದು ಜಖಂ ಗೊಂಡಿದೆ.