ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ

ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ ಮಿರ್ಜಾನದಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ಬೈಕ್ ಸವಾರ ಮತ್ತು ಕುಮಟಾದಿಂದ ಮಿರ್ಜಾನ್ ಕಡೆಗೆ ಹೋಗುತ್ತಿದ್ದ ಎರಡು ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಗಾಯಗೊಂಡವರನ್ನು 108 ವಾಹನದಲ್ಲಿ
ಕುಮಟಾ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಗೋಮೂತ್ರದಿಂದ 8 ಔಷಧಗಳನ್ನು ಅಭಿವೃದ್ಧಿಪಡಿಸಿದೆ: ಯೋಗಿ ಸರಕಾರ.

ಚಾಕು ಇರಿತ ಪ್ರಕರಣ : ಆರೋಪಿ ಪೊಲೀಸ್ ಬಲೆಗೆ.

ಸಿದ್ದಾಪುರ: ಅಣ್ಣನಿಗೆ ತಂಗಿ ನಂಬರ್ ನೀಡಬೇಕೆಂದು ಪೀಡಿಸಿ, ಆತ ನೀಡದೆ ಇರುವಾಗ ಆತನ ಹೊಟ್ಟೆಯ ಭಾಗಕ್ಕೆ ಚೂರಿ ಇರಿದು ಆರೋಪಿ ನಾಪತ್ತೆಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿ ತಲೆ ಬೋಳಿಸಿಕೊಂಡು ತಿರುಗಾಡುತ್ತಿದ್ದ ಎನ್ನಲಾಗಿದೆ. ಆದರೆ, ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೌದು, ತಾಲೂಕಿನ ಅವರಗುಪ್ತ ಐಟಿಐ ಕಾಲೇಜ್ ಬಳಿ ಸೋಮವಾರ ಇಬ್ಬರು ಯುವಕರ ನಡುವೆ ಚಾಕು ಇರಿತ ಘಟನೆ ನಡೆದಿತ್ತು.

RELATED ARTICLES  ಜೇಮ್ಸ್ ಬಾಂಡ್ ಬಳಕೆ ಮಾಡುತ್ತಿದ್ದ ಕಾರು ಹರಾಜಾಗಿದ್ದು ಎಷ್ಟು ಬೆಲೆಗೆ ಗೊತ್ತಾ?

24 ಗಂಟೆಯೊಳಗೆ ಆರೋಪಿ ಸುಮನ್ ಗೌಡರ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಸುಮನ್ ಗೌಡರ ಮತ್ತು ಪವನ ನಾಯ್ಕ ನಡುವೆ ಸೋಮವಾರ ಚೂರಿ ಇರಿತ ಘಟನೆ ನಡೆದಿದ್ದು, ಆರೋಪಿಯು ಪವನನ ತಂಗಿ ನಂಬರ್ ನೀಡಬೇಕೆಂದು ಪೀಡಿಸುತ್ತಿದ್ದ.

ಆತ ನೀಡದಿದ್ದಕ್ಕಾಗಿ ಪವನ್‌ನ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದು ತಕ್ಷಣ ಆರೋಪಿ ನಾಪತ್ತೆಯಾಗಿದ್ದ. ಗಾಯಗೊಂಡ ಪವನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎನ್ನಲಾಗಿದೆ. ಈ ಇಬ್ಬರ ನಡುವೆ ಈ ಮೊದಲು ಕೂಡಾ ಜಗಳ ನಡೆದಿತ್ತು ಎನ್ನಲಾಗಿದೆ.