ಯಲ್ಲಾಪುರ: ವ್ಯಕ್ತಿಯೊರ್ವನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ತಾಲೂಕಿನ ವಡೆಹುಕ್ಳಿ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ.
ವಡೆಹುಕ್ಳಿ ನಿವಾಸಿ ರಮೇಶ ಮಳಿಕ (50) ಕರಡಿ ದಾಳಿಗೊಳಗಾದ ವ್ಯಕ್ತಿಯಾಗಿದ್ದಾನೆ. ಮನೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಮೇಯಲು ಬಿಟ್ಟ ಹಸುವನ್ನು ಕರೆ ತರಲಿ ಹೋದಾಗ ಗ್ರಾಮದ ಸಮೀಪವೇ ಕರಡಿ ದಾಳಿ ಮಾಡಿದೆ. ರಮೇಶನ ಕೈ ಹಾಗೂ ಮುಖಕ್ಕೆ ಗಂಭಿರ ಗಾಯಗೊಳಿಸಿದೆ. ಈತ ಕರಡಿಯಿಂದ ತಪ್ಪಿಸಿಕೊಂಡು ಗ್ರಾಮದ ಬಳೀ ಓಡಿ ಬಂದಿದ್ದಾನೆ.
ಯಲ್ಲಾಪುರದ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದರುಕೊಂಡು ಹೋಗಲಾಗಿದೆ.ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ.ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಪರ್ತಗಾಳಿ ಶ್ರೀಗಳ ದಿಗ್ವಿಜಯೋತ್ಸವ ಮೆರವಣಿಗೆ ಇಂದು