ಅರಬೈಲ್ ಘಟ್ಟದಲ್ಲಿ ಪೊಲ್ಸ್ ತುಂಬಿದ ಲಾರಿ ಪಲ್ಟಿ

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ಮೇಲೆ ಅರಬೈಲ್ ಘಟ್ಟದಲ್ಲಿ ಪೊಲ್ಸ್ ತುಂಬಿದ ಲಾರಿ ಪಲ್ಟಿ ಬಿದ್ದು, ಸ್ವಲ್ಪ ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಪೊಲ್ಸ್ ತುಂಬಿಕೊಂಡು ಹೊರಟ್ಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಬಿದ್ದಿದ್ದು, ಚಾಲಕ ನಿರ್ವಾಹಕ ಸಣ್ಣಪುಟ್ಟ ಗಾಯ ಹೊರತು ಪಡಿಸಿ ಅಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಹಾಗೂ ಗಟಾರದಲ್ಲಿ ಪೋಲ್ಸ್ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಪೊಲೀಸರು ಪ್ರಕರಣ ಪರಿಶೀಲಿಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

RELATED ARTICLES  ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ.

ನಾಳೆ ಕಾರವಾರಕ್ಕೆ ಬರಲಿದೆ ವಿಜಯ ಜ್ಯೋತಿ

ಕಾರವಾರ: ‘ಸ್ವರ್ಣಿಮ್ ವಿಜಯ್ ವರ್ಷ’ದ ಅಂಗವಾಗಿ ಸೆ.17 ರಂದು ದೇಶದಾದ್ಯಂತ ಸಂಚರಿಸುತ್ತಿರುವ ವಿಜಯ ಜ್ಯೋತಿಯು ಸೆಪ್ಟೆಂಬರ್ 17ರಂದು ಕಾರವಾರಕ್ಕೆ ಆಗಮಿಸಲಿದೆ. 2020ರ ಡಿ.16ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿರುವ ಕಾರ್ಯಕ್ರಮಗಳು ಮುಂದುವರಿದಿದೆ. ಈ ವರ್ಷದ ಡಿಸೆಂಬರ್ 16ರಂದು ವಾರ್ಷಿಕೋತ್ಸವ ಸಮಾರಂಭವು ನವದೆಹಲಿಯಲ್ಲಿ ನಡೆಯಲಿದೆ. 1971ರ ಭಾರತ- ಪಾಕ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸಾಧಿಸಿದ ವಿಜಯದ ಸಂಕೇತವಾಗಿ ಈ ಬಾರಿ 50ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸಲು, ವಿಜಯಕ್ಕೆ ಕಾರಣರಾದವರಿಗೆ ಗೌರವ ಸಲ್ಲಿಸಲು ಮತ್ತು ವಿಜಯದ ಆಚರಣೆಯ ಸಂಕೇತವಾಗಿ ಭಾರತೀಯ ರಕ್ಷಣಾ ಪಡೆಗಳಿಂದ ‘ಸ್ವರ್ಣಿಮ್ ವಿಜಯ್ ವರ್ಷ’ವೆಂದು ಆಚರಿಸಲಾಗುತ್ತಿದೆ.

RELATED ARTICLES  ವಾಚಾಳಿತನಕ್ಕೆ ದೊರೆತ ಶಿಕ್ಷೆ

ಒಂದು ವರ್ಷದ ಅವಧಿಯ ‘ಸ್ವರ್ಣಿಮ್ ವಿಜಯ್ ವರ್ಷ’ ಆಚರಣೆಯ ಕಾರ್ಯಕ್ರಮಗಳಿಗೆ ಡಿಸೆಂಬರ್ 16, 2020ರಂದು ಪ್ರಧಾನಿ ನರೇಂದ್ರ ಮೋದಿ ವಿಜಯ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದ್ದರು. ಈ ವಿಜಯದ ಜ್ಯೋತಿಯು ಭಾರತದ ಉದ್ದಗಲಕ್ಕೆ ಸಂಚರಿಸುತ್ತಿದ್ದು, ಡಿಸೆಂಬರ್ 15ರಂದು ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ತಲುಪಲಿದೆ. ಈ ಜ್ಯೋತಿ ಇದೀಗ ಕಾರವಾರ ಐಎನ್‍ಎಸ್ ಕದಂಬ ನೌಕಾನೆಲೆಗೆ ಬರಲಿದ್ದು, ಸೆಪ್ಟೆಂಬರ್ 24ರವರೆಗೆ ಇಲ್ಲಿಯೇ ಇರಲಿದೆ.