ಹುಬ್ಬಳ್ಳಿ: ಪದ್ಮಶ್ರೀ ಪುರಸ್ಕೃತ ಸಂಸ್ಕೃತ ವಿದ್ವಾಂಸರಾದ ಮಾರ್ತಂಡ ದೀಕ್ಷಿತರ ಜನ್ಮಶತಮಾನೋತ್ಸವ ನಿಮಿತ್ತ ಇತ್ತೀಚೆಗೆ ಹುಬ್ಬಳ್ಳಿಯ ವಿದ್ಯಾನಗರದ ಮರಾಠಾ ಭವನದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಅವರ ಪ್ರಶಿಷ್ಯರಾದ ಕು ರೋಹಿಣಿ ಭಟ್ಟ ಮೈಸೂರು, ಸುರಭಿ ಕುಲಕರ್ಣಿ ಧಾರವಾಡ, ನಿತ್ಯಾ ಕವಠೇಕರ  ಒಂದು ಗಂಟೆಗಳ ಕಾಲ ಸಂಸ್ಕೃತ ಪದ್ಯಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿ ನಾದಸರಸ್ವತಿಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

 

ಆರಂಭದಲ್ಲಿ ಕಲಾವತಿ ರಾಗದಲ್ಲಿ ಹೇ! ಗಂಗೇ! ತ್ರಿವೇಣಿ ಎಂಬ ಪದ್ಯವನ್ನು 10 ಮಾತ್ರೆಯ ಝಪ ತಾಲದ ವಿಲಂಬಿತ ಲಯದಲ್ಲಿ ಹಾಡಿ, 7 ಮಾತ್ರೆಯ ರೂಪಕ ತಾಲದ ದ್ರುತ್ ಲಯದಲ್ಲಿ ಸಂಸ್ಕೃತ – ಸಂಗೀತ ವಿದ್ವಾನ್ ಡಾ ಕೆ ಗಣಪತಿ ಭಟ್ಟರ ಆಶುರಚನೆ ‘ಕಾಶೀತಲವಾಹಿನಿ ಗಂಗಾ, ಭವಹಾರಿಣಿ ತರಂಗಿಣಿ | ಗಂಗಾಧರಸ್ಯ ಅರ್ಧಾಂಗಿನಿ, ಮಾರ್ತಂಡ ಪೂಜಿತ ಸುರಧುನಿ’ ಎಂಬ ಪದ್ಯವನ್ನು ಹಾಡಿದರು.

RELATED ARTICLES  ವಿಜಯ್ ಮಲ್ಯ ಬಂಧನ : ಬಂಧನವಾದ ಕೆಲ ಸಮಯಕ್ಕೆ ಕೋರ್ಟ್ ನಿಂದ ಜಾಮೀನು

ಅನಂತರ ರಸವತಿ ರಸನಾಲೋಲೇ ಎಂಬ ನೃತ್ಯ ಸಾಹಿತ್ಯವನ್ನು ತೀನ ತಾಲದಲ್ಲಿ, ವೇದವಾಣಿ ಪುಣ್ಯಜನನಿ ಎಂಬುದನ್ನು ದಾದರಾ ತಾಲದಲ್ಲಿ ಹಾಗು ಕೊನೆಯಲ್ಲಿ ಬಾಗಲಕೋಟೆಯ ಅರುಣ ದೇಸಾಯಿಯವರು ರಚಿಸಿದ ಅರವಿಂದ ಕಂದನ ಗುರುಬಂಧುವಾಗಿ ಎಂಬ ಆರತಿಹಾಡನ್ನು ಭೈರವಿ ರಾಗ ಹಾಗು ಭಜನಠೇಕಾ ತಾಲದಲ್ಲಿ ಹಾಡಿ ಸೈ ಎನಿಸಿಕೊಂಡರು. ಕು ಕಾರ್ತಿಕ ಕವಠೇಕರ ತಬಲಾ ಮತ್ತು ಕು ಸುಮಾ ಭಟ್ಟ ಯಲ್ಲಾಪುರ ಸಂವಾದಿನಿ ಸಾಥ ನೀಡಿದರು. ಡಾ ಭಾಸ್ಕರ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.  ಕೂಡಲಿ ಶೃಂಗೇರಿ ಮಠದ ವಿದ್ಯಾಭನವ ನರಸಿಂಹ ಭಾರತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಉದಯೋನ್ಮುಖ ಕಲಾವಿದರನ್ನು ಗೌರವಿಸಲಾಯಿತು. ಕಿರಣ ದೀಕ್ಷಿತ, ನರಸಿಂಹರಾವ ಸೋಮಲಾಪುರ, ಸಿ ಆರ್ ಜೋಶಿ, ಸುಮಂಗಲಾ ಭಟ್ಟ, ಡಾ ಛಾಯಾ ದೀಕ್ಷಿತ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಮುರುಘಾ ಮಠದ ಶ್ರೀ ಅರೆಸ್ಟ್ ಆಗಿಲ್ಲ : ಗಾಳಿ ಸುದ್ದಿಗೆ ಕಿವಿ ಕೊಡಬೇಡಿ ಎಂದ ಶ್ರೀಗಳು