ಯಲ್ಲಾಪುರ : ಯಲ್ಲಾಪುರ ತುಡಗುಣಿಯ ವಿಶಾಲನಗರದಲ್ಲಿ ಮಹಿಳೆಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿತ್ತು. ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸರೋಜಿನಿ ನಾಯರ್ ಮನೆಯಲ್ಲಿ ನಿಗೂಢವಾಗಿ ಕೊಲೆಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಸರೋಜಿನಿ ನಾಯರ್ ಮನೆಯಲ್ಲಿ ತಮ್ಮ ತಂಗಿ, ತಾಯಿ ಹಾಗೂ ತಂಗಿಯ ಮಗನ ಜೊತೆ ಇರುತ್ತಿದ್ದರು. ಅವರ ತಂಗಿ ಬೆಳಿಗ್ಗೆಯೇ ಎಲ್ಲಿಯೋ ಹೋಗಿದ್ದರು. ಈ ವೇಳೆ ಮನೆಗೆ ಬಂದ ಆರೋಪಿ ತಂಗಿ ಇಲ್ಲದ್ದನ್ನು ನೋಡಿದ್ದು, ಸರೋಜಿನಿ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ. ಈ ಸಿಟ್ಟಿಗೆದ್ದ ಆರೋಪಿ ಈಕೆಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಅಲ್ಲದೆ, ತಂಗಿಯ ಮಗನನ್ನು ಚಾಕು ಹಿಡಿದು ಹೆದರಿಸಿ ತನ್ನ ಜೊತೆ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಇದೀಗ ಪೊಲೀಸರು ಕೊಲೆಗೆ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. ಶಿರಸಿ ತಾಲೂಕು ಕೆರೆಕೊಪ್ಪದ ಕೃಷ್ಣನಾಯ್ಕ ಆರೋಪಿ ಎಂದು ಪೊಲೀಸ್ ಮಾಹಿತಿ ಬಂದಿದೆ. ಕೊಲೆಯಾದ ಸರೋಜ ನಾಯರ್ ತಂಗಿ ಹಾಗೂ ಆರೋಪಿ ಕೃಷ್ಣಾಯ್ಕ ನಡುವೆ ಅನೈತಿಕ ಸಂಬಂಧವಿತ್ತು ಎಂಬ ಮಾತುಗಳು ಕೇಳಿಬಂದಿದೆ. ಈಕೆ ಇತ್ತೀಚೆಗೆ ಆರೋಪಿಯ ಜೊತೆ ಜಗಳ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದಳು ಎಂದು ಮಾಹಿತಿ ಲಭ್ಯ ವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಘಟನೆ ಯಾವ ನಿಟ್ಟಿನಲ್ಲಿ ಸಾಗಲಿದೆ ಎಂದು ಪೊಲೀಸ್ ತನಿಖೆಯ ನಂತರ ತಿಳಿಯಬೇಕಿದೆ.