ಭಟ್ಕಳ : ಸುರತ್ಕಲ್ ನಿಂದ 50 ಲಾರಿಗಳನ್ನು ತೆಗೆದುಕೊಂಡು ಹೊಗುತ್ತಿದ್ದ ರೈಲಿನಲ್ಲಿ ಗುಜರಾತ್ ನಿಂದ ಕೊಚ್ಚಿಗೆ ತೆರಳುತ್ತಿರುವ ಶಾಂಪು ತುಂಬಿದ ಲಾರಿಗೆ ರೈಲ್ವೆ ಇಲಾಖೆಯ ಹೈ ಪವರ್ ವಿದ್ಯುತ್ ವೈರ್ ನಿಂದ ಕಿಡಿ ಹಾರಿ ಬೆಂಕಿ ಕಾಣಿಸಿಕೊಂಡು ಅವಾಂತರ ಸೃಷ್ಟಿಯಾದ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ಶಿರೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎನ್ನಲಾದ ಘಟನೆ ಇದಾಗಿದೆ.

RELATED ARTICLES  ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯಲ್ಲಿ ಮುಂದುವರಿದಿದೆ ಭಾರತದ ಪದಕ ಬೇಟೆ.

ಈ ಬಗ್ಗೆ ಶಿರೂರು ರೇಲ್ವೆ ಸ್ಟೇಷನ್ ಮಾಸ್ಟರ್ ಸಂದೀಪ್ ಕುಮಾರ ಅವರು ನೀಡಿದ ಮಾಹಿತಿಯ್ವನಯ ಭಟ್ಕಳದ ಅಗ್ನಿ ಶಾಮಕ ದಳ‌ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಂಕಿ‌ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ‌ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಆಗುವ ಅನಾಹುತವನ್ನು ತಪ್ಪಿಸಲಾಗಿದೆ.

ಭಟ್ಕಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಎಸ್ ರಮೇಶ್ ಶೆಟ್ಟಿ, ಪ್ರಮುಖ ಅಗ್ನಿಶಾಮಕ ಮಹಮ್ಮದ್ ಶಫಿ, ಎಸ್. ಮೊಗಲ್, ಅಗ್ನಿ ಶಾಮಕ ಚಾಲಕ ಶಿವಪ್ರಸಾದ ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

RELATED ARTICLES  ಪರೇಶ ಮೇಸ್ತಾ ಸಾವಿನ ಪ್ರಕರಣ ಸಿಬಿಐ ತನಿಖೆಗೆ! ನ್ಯಾಯದ ನಿರೀಕ್ಷೆಯಲ್ಲಿ ಕುಟುಂಬ

ಈ ಸುದ್ದಿಗಳನ್ನೂ ಓದಿ..