ಕುಮಟಾ ಕಡ್ಲೆಯ ತೀರದಲ್ಲಿ ಡಾಲ್ಫಿನ್ ಶವ ಪತ್ತೆ
ಕುಮಟಾ: ಇಲ್ಲಿನ ಸಮುದ್ರ ತೀರದಲ್ಲಿ ಡಾಲ್ಪಿನ್ ಕಳೇಬರ ಪತ್ತೆಯಾಗಿದೆ. ಈ ಡಾಲ್ಪಿನ್ ಸುಮಾರು 3 ಮೀಟರ್ ಉದ್ದವಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಹೌದು, ತಾಲೂಕಿನ ಹೊಲನಗದ್ದೆಯ ಕಡ್ಲೆಯ ಮೃತ ಡಾಲ್ಪಿನ್ ಪತ್ತೆಯಾಗಿದೆ.
ಇತ್ತೀಚಿನ ದಿನದಲ್ಲಿ ಉತ್ತರಕನ್ನಡದ ಕರಾವಳಿಯಲ್ಲಿ ಡಾಲ್ಪಿನ್ ಸಾವಿನ ಪ್ರಕರಣ ಹೆಚ್ಚುತ್ತಿದೆ. ಅಲ್ಲದೆ, ಕಳೆದ 6 ತಿಂಗಳ ಅವಧಿಯಲ್ಲಿ ತಾಲೂಕಿನ ಸುತ್ತಮುತ್ತಲಿನ ಸಮುದ್ರ ತೀರದಲ್ಲಿಯೇ 8 ಕ್ಕೂ ಹೆಚ್ಚು ಮೃತ ಡಾಲ್ಪಿನ್ ಪತ್ತೆಯಾಗಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
ಅಕ್ರಮ ಮದ್ಯ ಸಾಗಾಟ : ಆರೋಪಿ ಅಂದರ್..!
ಶಿರಸಿ: ನಗರದಿಂದ ಸಿದ್ದಾಪುರ ತಾಲೂಕಿನ ಹಳ್ಳಿಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವ ವೇಳೆ ಅಬಕಾರಿ ಇಲಾಖೆಯ ದಕ್ಷಿಣ ಕನ್ನಡ ವಿಭಾಗದ ಜಂಟಿ ಆಯುಕ್ತರ ಕಚೇರಿ ಅಧಿಕಾರಿಗಳು ದಾಳಿ ನಡೆಸಿ, ಆರೋಪಿ ದಿನೇಶ ವೈಕುಂಠ ಸಹಿತ ಮದ್ಯವನ್ನು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ. ಈತ ನಗರದಿಂದ ಸಿದ್ದಾಪುರ ತಾಲೂಕಿನ ಕಾನಸೂರಿಗೆ ಓಮಿನಿಯಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಅಗಸೆಬಾಗಿಲ ಬಳಿ ದಾಳಿ ನಡೆಸಿದ ಅಧಿಕಾರಿಗಳು, ಅಂದಾಜು 60 ಲೀಟರ್ ಭಾರತೀಯ ಮದ್ಯ ಹಾಗೂ 12 ಲೀಟರ್ ಬಿಯರ್ ವಶಕ್ಕೆ ಪಡೆದಿದ್ದಾರೆ.
ಆರೋಪಿ ಜತೆ ಓಮಿನಿ ವಾಹನ ಸೇರಿ ಒಟ್ಟು 1,77,625 ರೂ. ಮದ್ಯವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದ್ದಾರೆ. ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ಮಾರ್ಗದರ್ಶನದಲ್ಲಿ ಜೆಸಿ ಸ್ಕ್ಯಾಡ ಅಧಿಕಾರಿ ಸಿದ್ದಪ್ಪ ಮೇಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಪತ್ನಿಯಮೇಲೆ ಹಲ್ಲೆ ಮಾಡಿದಾತನಿಗೆ ಶಿಕ್ಷೆ
ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸ್ಥಳೀಯ ನ್ಯಾಯಾಲಯ 6 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಆರೋಪಿಯನ್ನು ಶಿವಮೊಗ್ಗ ಹೊಸನಗರ ಮೂಲದ, ಇಲ್ಲಿನ ಬದ್ರೀಯ ಕಾಲೋನಿ ನಿಂಶೌಕತ್ ಅಲಿ ಮಹರ್ ಹಾಗೂ ಸಂತ್ರಸ್ಥ ಮಹಿಳೆಯನ್ನು ಬೀಬಿ ಖತೀಜಾ ಎಂದು ಗುರುತಿಸಲಾಗಿದೆ. ಈತನ ವಿರುದ್ಧ 1999ರಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರ ಬಂದ ಈತ ನಂತರ ತಲೆ ಮರೆಸಿಕೊಂಡಿದ್ದು, ಆತನನ್ನು 2018ರಲ್ಲಿ ಬಂಧಿಸಿ ಭಟ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.