ಶಿರಸಿ: ನಗರದ ಚೌಕಿಮಠದ ಸಮೀಪದಲ್ಲಿರುವ ಬಣ್ಣದಮಠ ಕಾಂಪ್ಲೆಕ್ಸ್ ನಲ್ಲಿನ ರತ್ನದೀಪ ಜ್ಯುವೆಲರಿಯಲ್ಲಿ ಶುಕ್ರವಾರ ಸಂಜೆ 8 ರ ಹೊತ್ತಿಗೆ ಕಳ್ಳತನ ನಡೆದಿದೆ. ಸ್ವಿಫ್ಟ್ ಕಾರ್ ನಲ್ಲಿ ಗ್ರಾಹಕರಂತೆ ಬಂದವರು, ಚಿನ್ನ ಖರೀದಿ ಮಾಡುವವರಂತೆ ನಟಿಸಿ, ವ್ಯಾಪಾರಿಯ ಕೈಯ್ಯಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೋಲಿಸರು ಕಳ್ಳರನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.
ಜನದಟ್ಟಣೆಯ ಸಮಯದಲ್ಲಿಯೇ ಇಂತಹ ದುಸ್ಸಾಹಸಕ್ಕೆ ಖದೀಮರು ಕೈಹಾಕಿರುವುದು ಸಾರ್ವಜನಿಕರಲ್ಲಿ ತುಸು ಆತಂಕವನ್ನು ಸೃಷ್ಟಿಮಾಡಿದ್ದು, ಪೋಲೀಸ್ ಇಲಾಖೆ ಈ ನಿಟ್ಟಿನಲ್ಲಿ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ವಿಡಿಯೋ ನೋಡಿ