ಮದ್ಯ ಮಾರಾಟ ಮಳಿಗೆ ಸ್ಥಾಪನೆ ವಿರೋಧಿಸಿ ಕುಮಟಾದ ಬಾಡ ಹಾಗೂ ಹುಬ್ಬಣಗೇರಿ ಗ್ರಾಮಸ್ಥರಿಂದ ಮನವಿ ಸಲ್ಲಿಕೆ.

ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ಸರ್ಕಾರದಿಂದ ಎಮ್.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ಬಾಡ ಹಾಗೂ ಹುಬ್ಬಣಗೇರಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಹಾಗೂ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಾಡ ಗ್ರಾಮದಲ್ಲಿ ಜನತಾ ವಿದ್ಯಾಲಯ ಮಾಧ್ಯಮಿಕ ಶಾಲೆ, ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ, ರೈತರ ಸೇವಾ ಸಹಕಾರಿ ಸಂಘ, ಗ್ರಾಮ ಪಂಚಾಯತ್ ಕಾರ್ಯಾಲಯ, ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮತ್ತು ಪುರಾತನ ಮಾರಿಕಾಂಬ ದೇಗುಲವಿದೆ.

ಈ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಕಟ್ಟಡಗಳು ಉದ್ದೇಶಿತ ಎಮ್.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆಯಿಂದ 300 ಮೀಟರ್ ವ್ಯಾಪ್ತಿಯಲ್ಲಿ ಬರುತ್ತದೆ. ಜನತಾ ವಿದ್ಯಾಲಯ ಮಾಧ್ಯಮಿಕ ಶಾಲೆಗೆ ಹಾಗೂ ಉದ್ದೇಶಿತ ಮದ್ಯ ಮಾರಾಟ ಮಳಿಗೆಗೆ ಕೇವಲ 30 ಮೀಟರ್ ಅಂತರವಿದ್ದು ದಿನಕ್ಕೆ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಆಗಮಿಸುವ ಗ್ರಾಮದಲ್ಲಿ ಸರ್ಕಾರ ಮದ್ಯ ಮಾರಾಟ ಮಳಿಗೆಗೆ ಅನುಮತಿ ನೀಡಿದ್ದಲ್ಲಿ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

RELATED ARTICLES  ಶಾಂತೇರಿ ಕಾಮಾಕ್ಷಿ ದೇವಾಲಯದ ಅರ್ಚಕ ವೇ.ಮೂ ವರದರಾಜ ಭಟ್ ಇನ್ನಿಲ್ಲ.

ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೋನಾ ನಿಯಮ ಸಡಿಲ : ಮಾಹಿತಿ ನೀಡಿದ ಜಿಲ್ಲಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿನ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಕರೋನಾ ನಿಯಮಗಳಲ್ಲಿ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಮುಲೈ ಮುಗಿಲ್ ರವರು ಆದೇಶ ಮಾಡಿದ್ದಾರೆ. ಈ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಇರುವ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ,ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಜಿಲ್ಲಾಧಿಕಾರಿ ಆದೇಶವು ಜಾರಿಯಾಗಿದ್ದು ಇದರಿಂದಾಗಿ ಗೋಕರ್ಣ, ಮುರುಡೇಶ್ವರ ಧಾರ್ಮಿಕ ಕ್ಷೇತ್ರಗಳಲ್ಲಿ ಬರುವ ಭಕ್ತರಿಗೆ ಸೇವೆಗಳಿಗೆ ಅವಕಾಶ ಸಿಕ್ಕಂತಾಗಿದೆ.

RELATED ARTICLES  ರಕ್ತದ ಓಕುಳಿ ಆಡಿ, ಯುವಕರನ್ನು ಸಮಸ್ಯೆಗೆ ಸಿಲುಕಿಸದೇ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬದುಕಬೇಕಾಗಿದೆ. : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.

ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಶೇ.1 ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇದ್ದು ಸಾವಿನ ಪ್ರಮಾಣ ಸಹ ಅತ್ಯಲ್ಪವಾಗಿದೆ. ಪ್ರವಾಸೋಧ್ಯಮ ಹಾಗೂ ಧಾರ್ಮಿ ಕ್ಷೇತ್ರಕ್ಕೆ ಹೆಸರಾಗಿರು ಜಿಲ್ಲೆಯಲ್ಲಿ ಪ್ರವಾಸಿಗರು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಿದೆ.ಆದರೂ ಕೋವಿಡ್ ಸಂಖ್ಯೆ ಈ ತಿಂಗಳಲ್ಲಿ ಅತ್ಯಲ್ಪವಾಗಿದ್ದು ಈ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ನೀಡಿದ್ದಾರೆ.