ಭಟ್ಕಳ : ತಾಲೂಕಿನ ಸರ್ಪನಕಟ್ಟೆ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಉಯಿಲಮುಡಿ ಕಡಲ ತೀರದಲ್ಲಿ ಮಹಿಳೆ ಮತ್ತು ಪುರುಷನ ಶವ ಪತ್ತೆಯಾಗಿದ್ದು ಈ ಶವದ ಸ್ವರೂಪ ಗಮನಿಸಿದ ಜನರು ಬೆಚ್ಚಿ ಬಿದ್ದಿದ್ದಾರೆ. ಶವ ಬೆಂಗಳೂರು ಮೂಲದ ನಿವಾಸಿ ಆದಿತ್ಯ ಬಿ ಎಸ್, ಹಾಗೂ ಲಕ್ಷ್ಮಿ ಬಿ ಅವರದ್ದು‌ ಎಂದು ತಿಳಿದು ಬಂದಿದೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 04-11-2018 ರ ರಾಶಿ ಭವಿಷ್ಯ ಇಲ್ಲಿದೆ.

ಅoದಾಜು ೩೫-೪೦ ವರ್ಷದ ಮಹಿಳೆ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗುರುತಿನ ಪತ್ತೆಗಾಗಿ ಇಬ್ಬರ ಹತ್ತಿರ ಇದ್ದ ಆಧಾರ ಕಾರ್ಡ್, ಪಾನ್ ಕಾರ್ಡ್, ಡ್ರೆöವಿಂಗ್ ಲೈಸ್ಸ್ನ್ಸ್ ಸಂಪೂರ್ಣ ಹರಿದು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿರುತ್ತದೆ. ಇವರ ಆಧಾರ ಕಾರ್ಡ್ ಗುರುತಿಸಿ ಇವರಿಬ್ಬರನ್ನು ಬೆಂಗಳೂರಿನವರು ಎಂದು ಅಂದಾಜಿಸಲಾಗಿದೆ.

RELATED ARTICLES  ಜಲಪಾತ ನೋಡಲು ಬಂದಿದ್ದ ಪ್ರವಾಸಿಗರಿಗೆ ಬಸ್ಕಿ ಹೊಡೆಸಿದ ಪೊಲೀಸರು.

ಸ್ಥಳಕ್ಕೆ ಗ್ರಾಮೀಣ ಠಾಣೆ ತನಿಕಾಧಿಕಾರಿ ರೇವತಿ ಭೇಟಿ ನೀಡಿ ತನಿಖೆ ಕೈಗೋಂಡಿದ್ದಾರೆ , ಸುದ್ದಿ ತಿಳಿದು ನೂರಾರು ಸಾರ್ವಜನಿಕರು ಬೆಚ್ಚಿ ಬಿದ್ದು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.