ಕುಮಟಾ : ಗೋಕರ್ಣದ ಸಮೀಪದ ಅಗ್ರಗೋಣನ ನಿವೃತ್ತ ಶಿಕ್ಷಕ ಮೋಹನ ಎಮ್.ನಾಯಕ ಇವರು ತಮ್ಮ ಮಗ ದಿ. ರವಿರಾಜ ಎಂ ನಾಯಕ ಅವರ ಸ್ಮರಣಾರ್ಥ ಲಾಯನ್ಸ್ ಹ್ಯೂಮಿನಿಟೇರಿಯನ್ ಸರ್ವಿಸ್ ಟ್ರಸ್ಟ್ ಕುಮಟಾ ನಡೆಸುತ್ತಿರುವ ಲಾಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆಗೆ ಶುಕ್ರವಾರ 1 ಲಕ್ಷದ 101 ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಗೋಕರ್ಣದ ಶಾಸ್ತ್ರಿ ಕ್ಲಿನಿಕ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಟ್ರಸ್ಟ್ ನ ಪರವಾಗಿ ಟ್ರಸ್ಟೀ ಡಾ. ಸತೀಶ ಪ್ರಭು ದೇಣಿಗೆಯನ್ನು ಸ್ವೀಕರಿಸಿದರು.

RELATED ARTICLES  ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಕಾರು ಜಪ್ತಿ.

ಈ ಸಂದರ್ಭದಲ್ಲಿ ಲಾಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಮಾತನಾಡಿ ಮೋಹನ್ ನಾಯಕ್ ಅವರು ಕಣ್ಣಿನ ಆಸ್ಪತ್ರೆಯ ಅಭ್ಯುದಯಕ್ಕೆ ಸಹಾಯ ಮಾಡಿದ್ದಾರೆ. ನಮ್ಮ ಆಸ್ಪತ್ರೆ ನೀಡುತ್ತಿರುವ ಸೇವೆ ಮತ್ತು ಕಾರ್ಯವನ್ನು ಪರಿಗಣಿಸಿ ಶ್ರೀಯುತರು ಈ ದೇಣಿಗೆಯನ್ನು ನೀಡಿದ್ದಾರೆ. ಅದು ಇತರರಿಗೂ ಪ್ರೇರಣೆಯಾಗಲಿ ಎಂದರು. ಅವರಿಗೆ ಟ್ರಸ್ಟಿನ ವತಿಯಿಂದ ಧನ್ಯವಾದ ಅರ್ಪಿಸಿದರು.

ಉಪಸ್ಥಿತರಿದ್ದ ಡಾ. ಮಹಾಬಲ ಶಾಸ್ರ್ತಿ ಮಾತನಾಡಿ ಮೋಹನ್ ನಾಯಕವರು ನೀಡಿದ ದೇಣಿಗೆ ಸಧ್ವಿನಿಯೋಗವಾಗಲಿ. ಅವರಿಗೆ ಭಗವಂತ ಇನ್ನೂ ಹೆಚ್ಚಿನ ಸಹಾಯ ಮಾಡುವ ಶಕ್ತಿ ನೀಡಲಿ. ಆಸ್ಪತ್ರೆಯ ನಿರ್ವಹಣೆ ಸುಲಭವಲ್ಲ. ಹಣಕಾಸಿನ ಸಮಸ್ಯೆ ನಿಭಾಯಿಸುವುದೇ ತುಂಬಾ ಕಷ್ಟದ ಕೆಲಸ. ಡಾ. ಸತೀಶ ಪ್ರಭು, ಜಯದೇವ ಬಳಗಂಡಿ ಮುಂತಾದವರು ಉತ್ತಮ ರೀತಿಯಲ್ಲಿ ಕಣ್ಣಿನ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ ಎಂದರು. ನಿವೃತ್ತ ಶಿಕ್ಷಕ ಗೋಪಾಲ ನಾಯಕ ಅಗ್ರಗೋಣ ಇದ್ದರು.

RELATED ARTICLES  ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಂಚಗ್ರಹ ಹಿರೇಮಠ ಸ್ವಾಮಿಗಳು