ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೈಗಡಿ ಗ್ರಾಮದಲ್ಲಿ ಆಯೋಜಿಸಿದ್ದ ‘ಅನ್ನದಂಗಳದಲ್ಲಿ ರೈತರೊಂದಿಗೆ ಸಂವಾದ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಭಾರತದಲ್ಲಿ ಆಹಾರಕ್ಕೆ ಮೊದಲು ಸ್ವಾವಲಂವನೆ ಇರಲಿಲ್ಲ. ಬೇರೆ ಕಡೆಗಳಿಂದ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಇಂದು ಭಾರತ ಆಹಾರದ ಸ್ವಾವಲಂಬನೆ ಕಂಡಿದೆ. 2021-22 ಕೃಷಿ ಬಜೆಟ್ 13,100 ಕೋಟಿಗೆ ಏರಿಕೆ ಕಂಡಿದ್ದು, ಕೊರೊನಾ ಸಮಯದಲ್ಲಿಯೂ ಕೂಡಾ 305 ಬಿಲಿಯನ್ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಆಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

RELATED ARTICLES  ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರಕಟ

ಭಾರತ ಆಹಾರಧಾನ್ಯ ರಫ್ತಿನಲ್ಲಿ 9 ನೇ ಸ್ಥಾನದಲ್ಲಿದೆ. ಕೃಷಿ ಜಿಡಿಪಿ 20.22 ರಷ್ಟಿದೆ. ರೈತರು ಬೆಳೆದ ಆಹಾರೋತ್ನ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವುದೇ ನಮ್ಮ ಮುಂದಿರುವ ಸವಾಲು ಎಂದರು. ಚಿಕ್ಕ ರೈತರನ್ನ ಒಟ್ಟುಗೂಡಿಸುವ ಸಲವಾಗಿ ರೈತ ಉತ್ಪಾದಕ ಕಂಪೆನಿಗಳನ್ನು ಸ್ಥಾಪಿಸಬೇಕು ಎಂಬುದು ಮೋದೀಜಿಯವರ ಯೋಜನೆ. ರೈತರು ಯಾವ ಬೆಳೆಯನ್ನ ಬೆಳೆದು ಅದಕ್ಕೆ ಎಷ್ಟು ಪ್ರಮಾಣದ ರಾಸಾಯನಿಕವನ್ನ ಬಳಸಬೇಕೆಂದು ರೈತರಿಗೆ ತರಬೇತಿಯ ಅವಶ್ಯಕತೆ ಇದೆ. ಇಂಡಸ್ಟ್ರೀ ಡಿಪಾರ್ಟ ಮೆಂಟನವರು ರಫ್ತು ಮಾಡುವ ಸಂದರ್ಭದಲ್ಲಿ ಆಹಾರ ಧಾನ್ಯಗಳಿಗೂ ಹೆಚ್ಚಿನ ಗಮನಕೊಡಬೇಕು ಎಂದು ಹೇಳಿದರು

RELATED ARTICLES  ರಿಕ್ಷಾಗೆ ಗುದ್ದಿದ ಕಾರು : ರಿಕ್ಷಾ ಚಾಲಕನಿಗೆ ಗಂಭೀರ ಗಾಯ : ಗೇರುಸೊಪ್ಪಾ ಸಮೀಪ ಘಟನೆ

ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಕೇಂದ್ರ ಸಚಿವರು ನಿಸರ್ಗದ ಮಡಿಲಿನ ಕುಗ್ರಾಮವಾದ ಕೈಗಾಡಿ ಊರಿಗೆ ಬಂದಿರುವುದು, ಅದರಲ್ಲು ಬೋಟಿ ದಾಟಿ ಅವರು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು. ರೈತರ ಎಲ್ಲ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯ ಬೆಳೆಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆಯನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗುವುದು, ನಮ್ಮ ಹಿರಿಯರು ಅಳವಡಿಸಿಕೊಂಡಿರುವ ಪದ್ಧತಿಯನ್ನು ಮರೆತ್ತಿದ್ದೇವೆ ರಾಸಾಯನಿಕ ಕೃಷಿ ಪದ್ದತಿಯನ್ನು ಅನುಸರಿದರಿಂದಾಗಿ ಇಂದಿನ ಜನಾಂಗವು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದೆ ಈ ಕಾರ್ಯಕ್ರಮದ ಮೂಲಕವಾಗಿ ಜಿಲ್ಲೆಯ ರೈತರು ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಬೇಕು ಎಂದರು.