ನೂತನವಾಗಿ ಆಗಮಿಸಿದ ಹೈಟೆಕ್ ೧೦೮ ಅಂಬ್ಯುಲೆನ್ಸ್‌ ಲೋಕಾರ್ಪಣ

ಕುಮಟಾ : ತಾಲೂಕಿಗೆ ನೂತನವಾಗಿ ಆಗಮಿಸಿದ ಹೈಟೆಕ್ ೧೦೮ ಅಂಬ್ಯುಲೆನ್ಸ್‌ನ್ನು ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ದಿನಕರ ಶೆಟ್ಟಿ ಲೋಕಾರ್ಪಣೆಗೊಳಿಸಿದರು. ಈ ಅಂಬ್ಯುಲೆನ್ಸ್ ಇ.ಸಿ.ಜಿ, ಡಾಪ್ಲರ್, ವೆಂಟಿಲೇಟರ್, ಐ.ಸಿ.ಯು ಸೇರಿದಂತೆ ಸಕಲ ಸೌಲಭ್ಯವನ್ನು ಹೊಂದಿದೆ. ಇಬ್ಬರು ಚಾಲಕರು, ಮೂವರು ನರ್ಸ್‌ಗಳು ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ, ಹೆಚ್ಚಿನ ಕಾಳಜಿ ವಹಿಸಲು ಜಿ.ವಿ.ಕೆ ಕಂಪೆನಿಗೆ ಆದೇಶ ನೀಡಲಾಗಿದೆ.

ಹೊಸ ಅಂಬ್ಯುಲೆನ್ಸ್ ನೀಡಿರುವುದಕ್ಕೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಸೆ. 30 ಕ್ಕೆ ಕುಮಟಾ ತಾಲೂಕಾ ನ್ಯಾಯಾಲಯದಲ್ಲಿ ಬೃಹತ್ ಲೋಕ್ ಅದಾಲತ್

ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿದೇರ್ಶನದಂತೆ ಸೆ.30 ರಂದು ಕುಮಟಾ ತಾಲೂಕಾ ನ್ಯಾಯಾಲಯದಲ್ಲಿ ಬೃಹತ್ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಈ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಕಾನೂನಿನ್ವಯ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಎಂ.ಎಂ. ಆರ್. ಡಿ ಪ್ರಕರಣಗಳು ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪರಿಹಾರಕೊರಿರುವ ಪ್ರಕರಣಗಳು, ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧ ದಾಖಲಾದ ಪ್ರಕರಣ, ಬ್ಯಾಂಕಗಳಿಗೆ ಸಂಬಂಧಿಸಿದ ಪ್ರಕರಣ, ವೈವಾಹಿಕ ಅಥವಾ ಜೀವನಾಂಶ ಪ್ರಕರಣ, ಆಸ್ತಿಯಲ್ಲಿ ವಿಭಾಗ ಕೋರಿರುವ ದಾವೆಗಳು, ಇತರೆ ಸಿವಿಲ್ ವ್ಯಾಜ್ಯಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.ಬ್ಯಾಂಕ್, ನೀರು ಮತ್ತು ವಿದ್ಯುತ್‌ಗೆ ಸಂಬಂಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ. ವಕೀಲರು, ಸಾರ್ವಜನಿಕರು ಹಾಗೂ ಕಕ್ಷಿದಾರರುಇದರ ಸದುಪಯೋಗ ಪಡೆದುಕೊಳ್ಳುವಂತೆ ಕುಮಟಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ನಾಯಕ ಅವರು ತಿಳಿಸಿದ್ದಾರೆ.

RELATED ARTICLES  ವೈಯಕ್ತಿಕ ದ್ವೇಷ : ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ? ದೂರು - ಪ್ರತಿದೂರು ದಾಖಲು

ಇಂದಿನಿಂದ ಮತ್ತೆ ಮಳೆಯಾಗುವ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆ.18 ರಿಂದ ಸೆ.21 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್.18 ರಿಂದ 21ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಸೆ. 21 ರವರೆಗೆ ಮಳೆಯಾಗುವ ಸಾಧ್ಯತೆ ಇದೆ.

RELATED ARTICLES  ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ.