ಕುಮಟಾ : ಉತ್ತರಕನ್ನಡದಲ್ಲಿ ಆಗಾಗ ಕೇಳಿಬರುತ್ತಿದ್ದ ಗಾಂಜಾ ಮಾರಾಟ ಪ್ರಕರಣ ಮತ್ತೆ ಉತ್ತರಕನ್ನಡದಲ್ಲಿ ಸದ್ದು ಮಾಡುತ್ತಿದೆ. ಮತ್ತೆ ಹೊನ್ನಾವರದಲ್ಲಿ ಗಾಂಜಾ ಮಾರಾಟ ಪ್ರಕರಣವೊಂದು ಕೇಳಿಬಂದಿದೆ.

ಗುಣವಂತೆಯ ಬೋಳೆಕಟ್ಟೆಯ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದವರನ್ನು ಮಂಕಿ ಪೋಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ಪ್ರಕರಣವನ್ನು ಎಮ್ ಡಿ ಪಿ ಎಸ್ ಕಾಯ್ದೆಯಡಿ ದಾಖಲಿಸಿಕೊಂಡಿದ್ದಾರೆ.

RELATED ARTICLES  ಅರ್ಥಪೂರ್ಣವಾಗಿ ಜರುಗಿದ ಮೈತ್ರೇಯಿ ಮಹಿಳಾ ಮಂಡಳದ ವಾರ್ಷಿಕೋತ್ಸವ

ಗುಣವಂತೆಯ ಜಗದೀಶ್ ಶಂಭು ಗೌಡ ಎನ್ನುವವರು ಗುಣವಂತೆಯ ಬೋಳೆಕಟ್ಟೆಯ ಸಮೀಪ 6000 ಮೌಲ್ಯದ 30 ಗ್ರಾಮ್ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದ. ಈ ಸಮಯದಲ್ಲಿ ಮಂಕಿ ಪೋಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

RELATED ARTICLES  ಮಳೆಯಿಂದಾಗಿ ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆ.

ಈ ಪ್ರಕರಣ ಸಂಬಂಧ ಆರೋಪಿಯನ್ನು ಮಂಕಿ ಪೋಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ತನಿಖೆಯ ನಂತರದಲ್ಲಿ ಈ ಕೃತ್ಯದ ಹಿಂದೆ ಯಾರು ಯಾರು ಇದ್ದಾರೆ? ದೊಡ್ಡ ಜಾಲವೇ ಇದೆಯೋ ಎಂಬ ಬಗ್ಗೆ ಮಾಹಿತಿ ತಿಳಿಯಬೇಕಿದೆ.