ಬನವಾಸಿ: ಪತಿಯ ಕಿರುಕುಳದಿಂದ ಮನ ನೊಂದಿದ್ದ ಪತ್ನಿ ಮಾನಸಿಕ ನೋವನ್ನು ತಾಳಲಾರದೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಸಿದ್ದಾಪುರ ಮೂಲದ ಶಿಲ್ಪಾ ವಿಜಯೇಂದ್ರ ಪಾಟೀಲ್ ಮೃತ ದುರ್ದೈವಿ ಎಂದು ವರದಿಯಾಗಿದೆ. ಗಂಡ ಅವಾಚ್ಯ ಶಬ್ದದಿಂದ ನಿಂದಿಸಿ ಇಲ್ಲ ಸಲ್ಲದ ಆರೋಪ ಮಾಡಿದ ನೋವಿನಿಂದ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

RELATED ARTICLES  ಕೃಷಿ ಸಂಬಂಧಿತ ವಸ್ತುಗಳನ್ನು ಖರೀದಿಸಲು ವಿನಾಯಿತಿ ನೀಡಬೇಕೆಂದು ಮನವಿ ಸಲ್ಲಿಸಿದ ಭಾಸ್ಕರ ಪಟಗಾರ

ಶಿಲ್ಪಾ ಎರಡು ವರ್ಷದ ಹಿಂದೆ ವಿಜಯೇಂದ್ರ ಜೊತೆಗೆ ವಿವಾಹವಾಗಿದ್ದು, ಆರಂಭದಲ್ಲಿ ಪತಿ ಪತ್ನಿಯರಿಬ್ಬರು ಅನ್ಯೋನ್ಯವಾಗಿದ್ದರು. ಆದರೆ, ಇತ್ತಿಚೆಗೆ ಗಂಡ ಹೆಂಡತಿಯ ಮಧ್ಯೆ ಮನಸ್ತಾಪ ಬಂದಿತ್ತು. ಹೀಗಾಗಿ ಹೆಂಡತಿಯನ್ನು ತವರು ಮನೆಗೆ ತಂದು ಬಿಟ್ಟುಹೋಗಿದ್ದ ಎಂದು ಸ್ಥಳೀಯವಾದ ಮಾಹಿತಿ ಲಭ್ಯವಾಗಿದೆ.

ಇತ್ತಿಚೆಗೆ ಆರೋಪಿ ವಿಜಯೇಂದ್ರ ಪಾಟೀಲ್ ತವರು ಮನೆಗೆ ಬಂದು ಗಲಾಟೆ ಮಾಡಿ, ಹೆಂಡತಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಆಕೆಯ ನಡತೆಯ ಬಗ್ಗೆಗೂ ಇಲ್ಲ ಸಲ್ಲದ ಆರೋಪ ಮಾಡಿದ್ದ. ಇದರಿಂದ ಮನನೊಂದ ಹೆಂಡತಿ ಸಾವಿಗೆ ಶರಣಾಗಿದ್ದಾಳೆ. ಈ ಸಂಬoಧ ಮೃತ ಮಹಿಳೆಯ ತಂದೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ದೂರು ನೀಡಲು ಬಂದಿದ್ದ ಪತ್ನಿಗೆ ಥಳಿಸಿದ ಗಂಡ.!