ಭಟ್ಕಳ : ಉತ್ತರಕನ್ನಡ ಹಾಗೂ ಭಟ್ಕಳದಲ್ಲಿ ಗೋವುಗಳ ಕಳ್ಳಸಾಗಣೆ ಹಾಗೂ ಗೋ ಮಾಂಸ ಸಾಗಾಟ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದೆ ಎಂದರೂ ತಪ್ಪಲ್ಲ. ಇದೀಗ ಮನೆಯ ಸನಿಹದಲ್ಲಿಯೇ ಇದ್ದ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಕಳ್ಳತನವಾಗಿದ್ದು ಭಾರೀ ಸುದ್ದಿಯಾಗುತ್ತಿದೆ.

ಮನೆಯ ಆವರಣದ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಎತ್ತನ್ನು ಯಾರೋ ಕದ್ದು ಪರಾರಿಯಾಗಿರುವ ಘಟನೆ ಭಟ್ಕಳದ ತಾಲೂಕಿನ ಹೆಬಳೆಯಲ್ಲಿ ನಡೆದಿದೆ. ಎತ್ತಿನ ಮಾಲಕರನ್ನು ಗಣಪತಿ ನಾರಾಯಣ ದೇವಡಿಗ ಎಂದು ಗುರುತಿಸಲಾಗಿದೆ. ಇವರು ಎತ್ತನ್ನು ಕೃಷಿ ಕೆಲಸಕ್ಕಾಗಿ ಬಳಸುತ್ತಿದ್ದರು. ಕಳುವಾದ ಎತ್ತಿನ ಮೌಲ್ಯ 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

RELATED ARTICLES  ಅರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ : ದಿನಕರ ಶೆಟ್ಟಿ

ಈ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್.ಐ.ಭರತ್ ತನಿಖೆ ಕೈಗೊಂಡಿದ್ದಾರೆ. ಮನೆಯ ಸನಿಹದ ಎತ್ತುಗಳೂ ಕಳ್ಳತನವಾಗಿದ್ದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರವಾಗಿ ಈ ಕೃತ್ಯದಲ್ಲಿ ಪಾಲ್ಗೊಂಡವರನ್ನು ಹೆಡೆಮುರಿ ಕಟ್ಟುವ ಭರವಣೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಒಂದು ಕೊರೋನಾಕ್ಕೆ ಓರ್ವ ಸಾವು : 225 ಕೋವಿಡ್ ಕೇಸ್..!