ಕಾರವಾರ : ಕಳೆದ 7 ದಿನಗಳಿಂದ ದೇವಾಲಯದ ಬಾಗಿಲು ತೆರದು ಭಕ್ತರಿಗೆ ದರ್ಶನ ನೀಡಿ ಎಲ್ಲರ ಕಷ್ಟ ಕಾರ್ಪಣ್ಯ ದೂರ ಮಾಡುವ ಹೊಸ ಭರವಸೆಯಾಗಿ ಬಂದಿದ್ದ ತಾಲೂಕಿನ ಹಣಕೋಣದ ಸಾತೇರಿ ದೇವಿಯ ದೇವಾಲಯದ ಬಾಗಿಲು ತೆರದು ಪೂಜೆ ಪುನಸ್ಕಾರಗಳು ಈ ವರ್ಷದಲ್ಲಿ ಇಂದು ದರ್ಶನದ ಕೊನೆಯ ದಿನವಾಗಿದ್ದು ಜನರು ಸಾಗರೋಪಾದಿಯಲ್ಲಿ ಬಂದು ದರ್ಶನ ಪಡೆದರು. ವರ್ಷದಲ್ಲಿ 7 ದಿನ ಮಾತ್ರ ಈ ದೇವಾಲಯದ ಬಾಗಿಲು ತೆರದಿರುತ್ತಿದ್ದು, ದರ್ಶನಕ್ಕೆ ಅವಕಾಶಸಿಗುತ್ತದೆ. ಈ ಬಾರಿ ಸೆ. 13ರಂದು ಮಧ್ಯರಾತ್ರಿ ದ ಬಾಗಿಲು ತೆರೆದಿತ್ತು.

ಈಗ ದೇವಾಲಯ ಇರುವ ಸ್ಥಳದಲ್ಲೆ ನೆಲೆಸಿದ್ದ ದೇವಿ, ಒಮ್ಮೆ ದೇವಾಲಯದ ಮುಂದಿರುವ ಬಾವಿ ಬಳಿ ಕೂದಲು ಬಾಚಿಕೊಳ್ಳುತ್ತಿದ್ದಳು. ದುಷ್ಟನೊಬ್ಬ ದೇವಿ ಕಡೆಗೆ ವಕ್ರದೃಷ್ಟಿಬೀರಿ, ಮುನ್ನುಗ್ಗಿದಾಗ ಆಕೆ ಅದೃಶ್ಯಳಾಗಿ, ಬಾವಿಯಲ್ಲಿ ಹಾರಿದಳು. ಬಾವಿ ಬಳಿ ದೇವಿ ಪಾದುಕೆ, ಹಣಿಗೆ ಕಂಡವು. ಕೆಲ ದಿನಗಳ ನಂತರ ಊರಿನ ಹಿರಿಯ ವ್ಯಕ್ತಿಯೊಬ್ಬರ ಕನಸಿನಲ್ಲಿ ತಾನು ಅದೃಶ್ಯಳಾದ ಬಗ್ಗೆ ತಿಳಿಸಿದಳು. ವರ್ಷಕ್ಕೆ ಏಳುದಿನ ಮಾತ್ರ ತನ್ನ ದರ್ಶನ ನೀಡುವುದಾಗಿ ದೇವಿ ಹೇಳಿದ್ದಳು. ತಾನು ನೆಲೆಸಿದ ಸ್ಥಳದಲ್ಲಿ ಗುಡಿ ನಿರ್ಮಿಸುವ ಬೇಡಿಕೆ ಇಟ್ಟಳು. ನಂತರ ಅಲ್ಲಿಗುಡಿ ನಿರ್ಮಿಸಲಾಯಿತು.

RELATED ARTICLES  ಗುರು ಇರಬೇಕು- ಗುರಿಯ ಸೇರಲು!

ಶಕ್ತಿ ದೇವತೆಯಾಗಿರುವ ಸಾತೇರಿ ದೇವಿ ಹಲವು ಪವಾಡ ಮಾಡಿರುವ ಪ್ರತೀತಿ ಇದೆ. 358 ದಿನ ಬಂದ್‌ ಇರುವ ಗರ್ಭಗುಡಿಯ ಬಾಗಿಲು ವರ್ಷದಲ್ಲಿ ಏಳುದಿನ ತಾನಾಗಿಯೇ ತೆಗೆಯುತ್ತದೆ ಎನ್ನುವ ನಂಬಿಕೆಯಿದೆ. ದೇವಿಯ ಜಾತ್ರೆ ಆಚರಣೆ, ಪರಂಪರೆಗಳೆಲ್ಲ ತೀರಾ ವಿಭಿನ್ನವಾಗಿದೆ. ಈ ದೇವಸ್ಥಾನದ ಸುತ್ತ ಐದು ದೇವಾಲಯ ಹಾಗೂ ಗ್ರಾಮ ಪುರುಷ, ರಾಮನಾಥ, ಚಣಕಾದೇವಿ, ಮ್ಹಾಳಸಾ ನಾರಾಯಣಿ ದೇವಾಲಯ, ಕಾಳಮೋರ ಚಣಕಭಕ್ತ, ಕಠೀಂದ್ರ, ಜೇಲ್‌ ಪುರುಷ ಮೊದಲಾದ ಗುಡಿಗಳಿವೆ. ಇಲ್ಲಿನ ಪರಿವಾರ ದೇವತೆಗಳ ದೇವಾಲಯಗಳಲ್ಲಿ ಪ್ರತ್ಯೇಕ ಆಚರಣೆಗಳು ನೆರವೇರುತ್ತವೆ. ಸಾತೇರಿ ದೇವಿಯ ವಾರ್ಷಿಕ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವಾರ್ಷಿಕ ಆಚರಣೆ ಹಿಂದೆ ಪೌರಾಣಿಕ ಐತಿಹ್ಯವಿದೆ.

RELATED ARTICLES  ಕೊಡುಗೈದಾನಿ ಶ್ರೀಮತಿ ಭಾಗೀರಥಿ ಶೆಟ್ಟಿ ಇನ್ನಿಲ್ಲ

ಹಣಕೋಣದ ಸಾತೇರಿ ಹಾಗೂ ಚಣಕಾದೇವಿ ಸಹೋದರಿಯರು ಎನ್ನುವ ಪ್ರತೀತಿಯಿದ್ದು, ಈ ದೇವಿಯರು ಪ್ರತ್ಯೇಕ ಕಡೆ ನೆಲೆಸಿ, ಜನರ ರಕ್ಷಣೆಯಲ್ಲಿ ತೊಡಗಿದ್ದರು. ಹಣಕೋಣದಲ್ಲಿದ್ದ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳ ನಿವಾರಣೆಗೆ ಅಗತ್ಯವಿದ್ದರೆ ಪ್ರತ್ಯಕ್ಷಳಾಗುತ್ತಿದ್ದಳು. ಮದುವೆ ಇನ್ನಿತರ ಸಮಾರಂಭಗಳಿಗೆ ಚಿನ್ನಾಭರಣ ಅಗತ್ಯವಿದ್ದವರು ಭಕ್ತಿಯಿಂದ ಕೇಳಿದಾಗ ಅವು ಅವರ ಮುಂದಿರುತ್ತಿದ್ದವು. ಆದರೆ ನಿಗದಿತ ಸಮಯದೊಳಗೆ ಮರಳಿಸದಿದ್ದರೆ ದೇವಿಯ ಅವಕೃಪೆಗೆ ಪಾತ್ರರಾಗಬೇಕಿತ್ತು ಎಂಬ ಕಥೆ ಪ್ರಚಲಿತದಲ್ಲಿದೆ.

7 ದಿನ ವಿಜೃಂಭಣೆಯಿಂದ ನಡೆಯುವ ಜಾತ್ರೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದರು ಆದರೆ ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಕೇವಲ ದೇವಸ್ಥಾನದ ಹೊರಗಿನಿಂದಲೇ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭಕ್ತರಿಗೆ ಪೂಜೆಗೆ ಅವಕಾಶವಿಲ್ಲ. 14ರಂದು ಕುಳಾವಿ ಸಮುದಾಯದ ಪೂಜೆ ನಡೆಯುತ್ತದೆ. ಇಂದಿನವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿತ್ತು.