ಭಟ್ಕಳ: ಕೂಲಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ವ್ಯಕ್ತಿಯೋರ್ವ ಮನೆಯ ಹತ್ತಿರದಲ್ಲಿಯೇ ಇರುವ ವೆಂಕಟಾಪುರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಕೈಕಾಲು ತೊಳೆಯಲು ನೀರಿಗೆ ಇಳಿದಾಗ ಆಕಸ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಮೃತನನ್ನು ವೆಂಕಟಾಪುರದ ವೆಂಕಟ್ರಮಣ ನಾಗಪ್ಪ ಗೊಂಡ ಎಂದು ಗುರುತಿಸಲಾಗಿದೆ. ಈತ ಮನೆಯಿಂದ ಗದ್ದೆ ಕೆಲಸಕ್ಕೆಂದು ಶನಿವಾರ ಬೆಳಿಗ್ಗೆ ಹೋಗಿದ್ದು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮನೆಯವರು ಎಲ್ಲ ಕಡೆಗಳಲ್ಲಿಯೂ ಹುಡುಕಾಟ ನಡೆಸಿದ್ದರೂ ಸಹ ಈತನ ಸುಳಿವು ಪತ್ತೆಯಾಗಿಲ್ಲ.

RELATED ARTICLES  ಆತ್ಮಹತ್ಯೆಗೆ ಶರಣಾದ ಯುವತಿ

ರವಿವಾರ ಸಂಜೆ 4 ಗಂಟೆಯ ಸುಮಾರಿಗೆ ವೆಂಕಟಾಪುರ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಯಾರೋ ನೋಡಿ ತಿಳಿಸಿದ್ದು ಶವ ಈತನದ್ದೇ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಶನಿವಾರ ಗದ್ದೆ ಕೆಲಸವನ್ನು ಮುಗಿಸಿ ಕೈಕಾಲು ತೊಳೆಯಲು ನದಿಗೆ ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಆತನ ಕುಟುಂಬಸ್ಥರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

RELATED ARTICLES  ಭಟ್ಕಳ: ಜಿ.ಎಸ್.ಬಿ ವಾರ್ಷಿಕೋತ್ಸವ ೨೦೨೩