ಕಾರವಾರ: ಉತ್ತರಕನ್ನಡದಲ್ಲಿ ಗಾಂಜಾ ಮಾರಾಟ ಪ್ರಕರಣ ಬಗ್ಗೆ ಪದೇ ಪದೇ ವರದಿಯಾಗುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಬೇರೆ ಬೇರೆ ತಾಲೂಕಿನಲ್ಲಿ ಒಂದಿಲ್ಲೊಂದು ಪ್ರಕರಣಗಳು ವರದಿಯಾಗುತ್ತಿದೆ. ಇದೀಗ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಪ್ರಕರಣ ಮಾಡಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟಮಾಡಲು ತಂದಿದ್ದ ಗಾಂಜಾ ವನ್ನು ಕಾರವಾರ ಶಹರ ಠಾಣಾ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನು ಕಾರವಾರ ನಗರದ ಕೋಣೆವಾಡದ ಕೆ.ಇ.ಬಿ ರಸ್ತೆಯ ಹಜರತ್ ಅಲಿ ಎಂದು ವರದಿಯಾಗಿದೆ.

RELATED ARTICLES  ಕಲಾಗಂಗೋತ್ರಿ-ಕುಮಟಾ ಆಶ್ರಯದಲ್ಲಿನಡೆದು ಪ್ರೇಕ್ಷಕರ ಮನ ಗೆದ್ದ "ಚಂದ್ರಾವಳಿ ವಿಲಾಸ"

ಆರೋಪಿಯು ಕಾರವಾರ ನಗರದ ಕೋಡಿಬಾಗ್ ನ ಸಾಗರ ದರ್ಶನ ಹಾಲ್ ಬಳಿ ಇರುವ ಪ್ರದೇಶದಲ್ಲಿ ಮಾರಾಟಕ್ಕೆ ತಂದ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಅರವಿಂದ್ ಕಲಗುಜ್ಜಿ ನೇತ್ರತ್ವದ ಶಹರಾ ಠಾಣೆಯ ಪಿ.ಐ ಸಿದ್ದಪ್ಪ, ಪಿ.ಎಸ್.ಐ ಸಂತೋಷ್ ಕುಮಾರ್ ಎನ್,ಸಿಪಿಸಿ ಸಂತೋಷ್ ನಾಯ್ಕ ಭಾವಿಕೇರಿ,ಜಟ್ಟಿನಾಯ್ಕ,ಸತ್ಯಾನಂದ ನಾಯ್ಕ,ತುಕಾರಾಮ,ರಾಮನಾಯ್ಕ ,ಮಹೇಶ್ ನಾಯ್ಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

RELATED ARTICLES  ಇಬ್ಬರು ಗೋ ಕಳ್ಳತನ ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಈ ಪ್ರಕರಣವನ್ನು ಭೇಧಿಸಿದ ಪೊಲೀಸರು ಈತನಿಂದ 520 ಗ್ರಾಮ್ ತೂಕದ ₹20000 ರೂ ಮೌಲ್ಯದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಈತನು ಗೋವಾ ದಿಂದ ಮಾದಕ ವಸ್ತುಗಳನ್ನು ತಂದು ಕಾರವಾರದಲ್ಲಿ ಸಾರ್ವಜನಿಕರಿಗೆ,ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ.