ಕುಮಟಾ : ವಿಧಾತ್ರಿ ಅಕಾಡೆಮಿಯವರು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಡೆಸುತ್ತಿರುವ ಸರಸ್ವತಿ ಪಿ‌.ಯು ಕಾಲೇಜಿನ ವಿದ್ಯಾರ್ಥಿಗಳು ಇಂದು ಪ್ರಕಟವಾದ ಸಿ.ಇ.ಟಿ ಫಲಿತಾಂಶದಲ್ಲಿ ಅತ್ಯುತ್ತಮ ಸ್ಥಾನಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಎಂಜನೀಯರಿಂಗ್, BNYS, ಅಗ್ರಿಕಲ್ಚರ್, ವೆಟರ್ನರಿ ವಿಭಾಗದಲ್ಲಿ ಅತ್ಯುತ್ತಮ ಶ್ರೇಣಿಯ ರ‍್ಯಾಂಕ್ ಗಳಿಸುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಪೂರ್ಣಿಮಾ ಪಟಗಾರ ಎಂಜನೀಯರಿಂಗ್ ವಿಭಾಗದಲ್ಲಿ 435 ರ‍್ಯಾಂಕ್, ಅನನ್ಯಾ ಎನ್ ಎಂಜನೀಯರಿಂಗ್ ವಿಭಾಗದಲ್ಲಿ 764 ನೇ ರ‍್ಯಾಂಕ್, ಹಾಗೂ ತೇಜಸ್ವಿನಿ ಶಾನಭಾಗ ಅಗ್ರಿಕಲ್ಚರ್ ವಿಭಾಗದಲ್ಲಿ 869 ನೇ ರ‍್ಯಾಂಕ್, ಪಡೆದು ಸಾವಿರದ ಒಳಗಿನ ರ‍್ಯಾಂಕಿಂಗ್ ಗಳಲ್ಲಿ ತಮ್ಮ ಹೆಸರು ನಮೂದಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಇನ್ನುಳಿದಂತೆ ಸಿ.ವಿ ನಮೃತಾ ಎಂಜನಿಯರಿಂಗ್ ನಲ್ಲಿ 2600, ಅನಿರುದ್ಧ ಹೆಗಡೆ ಎಂಜನಿಯರಿಂಗ್ ನಲ್ಲಿ 2752, ವಿನಾಯಕ ಗೌಡ ಅಗ್ರಿಕಲ್ಚರ್ 2424, ಸಂಪದಾ ಪಾವಸ್ಕರ್ ಅಗ್ರಿಕಲ್ಚರ್ ನಲ್ಲಿ 4138, ನಾಗಾಂಜಲಿ ನಾಯ್ಕ ಅಗ್ರಿಕಲ್ಚರ್ ನಲ್ಲಿ 4024 ವರ್ಷಿತಾ ಪಟಗಾರ ಎಂಜನಿಯರಿಂಗ್ ನಲ್ಲಿ  5129, ಜಿ.ಆರ್ ಸಂಪ್ರೀತಿ ಎಂಜನೀಯರಿಂಗ್ ನಲ್ಲಿ 5321, ವಸುಧಾ ಪ್ರಭು ಎಂಜನಿಯರಿಂಗ್ ನಲ್ಲಿ 5381, ಅಭಿಜ್ಞಾ ಕಲಭಾಗ ಎಂಜನಿಯರಿಂಗ್ ನಲ್ಲಿ 5901, ಶ್ರೇಯಾ ಶಾನಭಾಗ ಅಗ್ರಿಕಲ್ಚರ್ ನಲ್ಲಿ 6230 ನೇ ರ‍್ಯಾಂಕ್ ಪಡೆದು ಏಳು ಸಾವಿರದ ಒಳಗಿನ ರ್ಯಾಂಕ್ ಪಡೆದ ಪಟ್ಟಿಯಲ್ಲಿ ಹೆಸರು ದಾಖಲಿಸಿದ್ದಾರೆ.

RELATED ARTICLES  ಸರ್ಕಾರಕ್ಕೆ ಗೋಕರ್ಣದ ಕುರಿತು ಈ ಪರಿ ತರಾತುರಿಯ ನಡೆ ಅಗತ್ಯವಿತ್ತೇ?

 ಅಪೂರ್ವಾ ಶಾನಭಾಗ ಎಂಜನಿಯರಿಂಗ್ ನಲ್ಲಿ 7874, ನಿಧಿ ಗಜನಕರ್ ಎಂಜನಿಯರಿಂಗ್ ನಲ್ಲಿ 8224, ದರ್ಪಣ ಚೇಳ್ಕರ್ ಎಂಜಿನಿಯರಿಂಗ್ ನಲ್ಲಿ 8748, ನಂದಿನಿ ಪೈ 10150 ನೇ ರ್ಯಾಂಕ್ ಪಡೆದು ಹತ್ತು ಸಾವಿರದ ಸನಿಹದ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಹೊಸದೊಂದು ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ವಿಧಾತ್ರಿ ಅಕಾಡೆಮಿ ಸರಸ್ವತಿ ಪಿ‌.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಅಣಿಗೊಳಿಸಿರುವುದಕ್ಕೆ ಇದು ಸಾಕ್ಷಿ ಎನ್ನುವಂತಿದೆ ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES  ಉತ್ತರಕನ್ನಡದ ಇಂದಿನ ಕೋವಿಡ್ ಅಪ್ಡೇಟ್

ಕೊರೋನಾ ಸಂಕಷ್ಟದ ಕಾಲದಲ್ಲಿಯೂ ನಿರಂತರವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಪರಿಕರಗಳನ್ನು ಕಾಲ ಕಾಲಕ್ಕೆ ಒದಗಿಸುವ ಮೂಲಕ ವಿಧಾತ್ರಿ ಅಕಾಡೆಮಿ ತನ್ನ ಬದ್ಧತೆ ಮೆರೆದಿದೆ ಎಂಬುದು ಪಾಲಕರಿಂದ ಕೇಳಿಬಂದ ಮಾತಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಶ್ರೇಣಿಗಳನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು ಈ ಸಾಧನೆ ನಿರಂತರವಾಗಲಿ ಹಾಗೂ ಈ ರೀತಿಯ ಸಾಧನೆಗಳು ಇನ್ನು ಹೆಚ್ಚು ವಂತಾಗಲಿ ಎಂದು ಪಾಲಕರು ಶುಭ ಹಾರೈಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ವಿಧಾತ್ರಿ ಅಕಾಡಮಿಯ ಮುಖ್ಯಸ್ಥರಾದ ಶ್ರೀ ಗುರುರಾಜ ಶೆಟ್ಟಿ, ಪ್ರಾಂಶುಪಾಲರಾದ ಮಹೇಶ ಉಪ್ಪಿನ್, ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ವಿಶ್ವಸ್ಥರು ಹಾಗೂ ಸಂಸ್ಥೆಯ ಶಿಕ್ಷಕರು ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.