ಯಲ್ಲಾಪುರ: ತಾಲೂಕಿನ ಚಕ್ರೇಬೈಲ್ ನ ಕೆರೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಯೋವೃದ್ಧ ವ್ಯಕ್ತಿಯೋರ್ವನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದಾಗಿದೆ.

ನಾಗರಖಾನ, ವಡ್ರಮನೆ ನಿವಾಸಿ ನಾಗೇಶ ರಾಮಚಂದ್ರ ಭಟ್ಟ (78) ಆತ್ಮಹತ್ಯೆ ಮಾಡಿಕೊಂಡ ವಯೋವೃದ್ಧರಾಗಿದ್ದು, ಈ ಕುರಿತು ಅವರ ಮಗ ದತ್ತಾತ್ರೇಯ ಭಟ್ ಪೊಲೀಸ್ ಠಾಣೆಗೆ ನೀಡಿ ದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನಾಗೇಶ್ ಭಟ್ಅವರಿಗೆ ಹಲವಾರು ಔಷಧ ಉಪಚಾರಗಳನ್ನು ಮಾಡಿದಾಗಲೂ ಕೂಡ ಗುಣವಾಗದೆ ಇರುವ ಹಿನ್ನೆಲೆಯಲ್ಲಿ, ಅದನ್ನೇ ಮನಸಿಗೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 16-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?.