ಸಾರಿಗೆ ಬಸ್ ಹಾಗೂ ಲಾರಿ ನಡುವೆ ಅಪಘಾತ

ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ಸಾರಿಗೆ ಬಸ್ ಮತ್ತು ಲಾರಿಯ ನಡುವೆ ಮುಖಾಮುಖಿ ಡಿಕ್ಕಿಸಂಭವಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 9 ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡ 9 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಘಟ್ಟದ ಇಳಿಜಾರಿನಲ್ಲಿ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದ ಲಾರಿ, ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ತಪ್ಪು ಬದಿಯಲ್ಲಿ ಚಲಿಸುತ್ತಿದ್ದ ಕಾರವಾರ-ಹುಬ್ಬಳ್ಳಿ ಬಸ್‍ಗೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತಕ್ಕೆ ಎರಡೂ ಚಾಲಕರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

RELATED ARTICLES  ಗಟಾರಕ್ಕೆ ಉರುಳಿ ಬಿದ್ದ ಪೆಟ್ರೋಲ್ ಟ್ಯಾಂಕರ್

ನಾಳೆ ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ

ಕುಮಟಾದ ಕೆ.ಪಿ.ಟಿ.ಸಿ.ಎಲ್. 110 ಕೆ.ವಿ. ವಿದ್ಯುತ್ ಗ್ರಿಡ್ ಅಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಗ್ರಾಮೀಣ ಪ್ರದೇಶವಾದ ಗೋಕರ್ಣ, ಮಾದನಗೇರಿ, ತದಡಿ, ಬಂಕಿಕೊಡ್ಲಾ, ಸಂತೆಗುಳಿ,ಕಲ್ಲಬ್ಬೆ, ಬಾಡ, ಧಾರೇಶ್ವರ್ ಹಾಗೂ ಮಾಸೂರು ಹಾಗೂ ನಗರ ಪ್ರದೇಶವಾದ ಕುಮಟಾ ಟೌನ್ ಹಾಗೂ ಚಿತ್ರೀಗಿ ಫೀಡರ್ ನ ಎಲ್ಲಾ ಭಾಗಗಳಲ್ಲಿ ದಿ:22/09/2021 ರ ಬುಧವಾರ ದಂದು ಮುಂಜಾನೆ 10:00 ರಿಂದ ಸಾಯಂಕಾಲ 3:30 ಗಂಟೆವರೆಗೆ ವಿದ್ಯುತ್ ವ್ಯತ್ಯಾಯ ವಾಗಲಿದೆಯೆಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

RELATED ARTICLES  ಕುಮಟಾ ಕಾಂಗ್ರೆಸಿಗರ ಒಗ್ಗಟ್ಟೇ ಚುನಾವಣೆಗೆ ಬಹುದೊಡ್ಡ ಬಲ : ಇಲ್ಲ ಸಲ್ಲದ ಸುದ್ದಿ ಹಬ್ಬಿಸಿ ಗೊಂದಲ‌ಸೃಷ್ಟಿ ಯತ್ನ : ನಾವೆಲ್ಲಾ ಒಂದೇ ಎಂದೆಂದ ಕುಮಟಾ ಕಾಂಗ್ರೇಸಿಗರು.