ಭಟ್ಕಳ: ಜಿಲ್ಲೆಯ ಅತ್ಯುತ್ತಮ ಕಬಡ್ಡಿ ತಂಡಗಳಲ್ಲೊoದಾಗಿರುವ ಪರಶುರಾಮ ಭಟ್ಕಳದ ಕೀ ಪ್ಲೇಯರ್ ಆಗಿದ್ದ ಮನೋಜ ನಾಯ್ಕ ಕುಂದಾಪುರದಲ್ಲಿ ಹೃದಯಾಘಾತದಿಂದ ನಿಧನರಾಗಿರುವುದಾಗಿ ವರದಿಯಾಗಿದೆ. ಇದು ಕಬ್ಬಡ್ಡಿ ಪ್ರೇಮಿಗಳಿಗೆ ಹಾಗೂ ಮನೋಜ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

ಹೆಸರಾಂತ ಸ್ಪೋರ್ಟ್ಸ್ ಕ್ಲಬ್ ಎನಿಸಿರುವ ಪರಶುರಾಮ ಭಟ್ಕಳ ತಂಡದ ಕಬ್ಬಡ್ಡಿ ಆಟಗಾರನಾಗಿ ಸಾಕಷ್ಟು ಹೆಸರು ಸಂಪಾದಿಸಿದ್ದ ಮನೋಜ ನಾಯ್ಕ ಹತ್ತು ಹಲವಾರು ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಲು ತನ್ನ ಆಟದಿಂದ ನೆರವಾಗಿದ್ದರು.

ಕಬಡ್ಡಿ ಆಟಗಾರನ ಆಕಸ್ಮಿಕ ಅಗಲಿಕೆಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ ಸಹಿತ ಹಲವು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಆಟದ ಜೊತೆ ಎದುರಾಳಿಯನ್ನು ಮಣಿಸುವ ತಂತ್ರಗಾರಿಕೆಯಲ್ಲಿಯೂ ಮುಂಚೂಣಿಯಲ್ಲಿದ್ದ ಪರಶುರಾಮ ತಂಡದೊoದಿಗೆ ಆಡುವಾಗ ಎದುರಾಳಿ ತಂಡದ ಅನೇಕ ಆಟಗಾರರು ಆಟವನ್ನೇ ತೊರೆಯುವಂತ ಗಂಭೀರ ಗಾಯಗೊಳ್ಳುವ ಹಲವು ಘಟನೆಗಳು ನಡೆದಿರುವುದು ಪರಶುರಾಮ ತಂಡ ಆಕ್ರಮಣಶೀಲತೆಗೆ ಉದಾಹರಣೆಯಾಗಿರುವ ಜೊತೆ ಎದುರಾಳಿ ಆಟಗಾರರ ಬೇಸರಕ್ಕೂ ಕಾರಣವಾಗುತ್ತಿತ್ತು.

RELATED ARTICLES  ಡಿ. ೬ ಹಾಗೂ ೭ ರಂದು ಪಾಲಿಟೆಕ್ನಿಕ್ ಸಿಬ್ಬಂದಿಗಳ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ.

ಸುನೀಲ್ ನಾಯ್ಕ ಸಂತಾಪ

ಕ್ರೀಡೆಯಲ್ಲಿ ಸಾಧನೆಯ ಮೆಟ್ಟಿಲನ್ನು ಏರಬೇಕಿದ್ದ ನಮ್ಮೂರ ಯುವ ಪ್ರತಿಭೆಯೊಂದು ನಮ್ಮನ್ನೆಲ್ಲಾ ಅಗಲಿದ ಸುದ್ದಿ ತಿಳಿದು ಆಘಾತವಾಗಿದೆ.

ಈ ಹಿಂದೆ ನಾನು ಪ್ರತಿನಿಧಿಸುತ್ತಿದ್ದ ಪರಶುರಾಮ ಭಟ್ಕಳ ಕಬಡ್ಡಿ ತಂಡದ ಸಧ್ಯಸ್ಯರಾಗಿದ್ದ ಮನೋಜ್ ನಾಯ್ಕ್ ಅವರು ಇಹಲೋಕವನ್ನು ತ್ಯಜಿಸಿದ್ದಾರೆ. ದೇವರು ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ ಎಂದು ಶಾಸಕ ಸುನೀಲ್ ನಾಯ್ಕ ಸಂತಾಪ ಸೂಚಿಸಿದ್ದಾರೆ.

RELATED ARTICLES  ಲಾಕ್ ಡೌನ್ ಹಿನ್ನೆಲೆ ಗ್ರಾಹಕರಿಲ್ಲದೆ ದರ್ಜಿಗಳು ಕಂಗಾಲು : ಸರ್ಕಾರದಿಂದ ಸಹಾಯಕ್ಕೆ ಮನವಿ

ಸಂತಾಪ ಸೂಚಿಸಿದ ಮಂಕಾಳ ವೈದ್ಯ

ಕ್ರೀಡಾ ರಂಗದಲ್ಲಿ ತನ್ನ ಬುದ್ದಿವಂತಿಕೆ ಆಟದಿಂದ ಅನೇಕ ಪ್ರಶಸ್ತಿ ಪಡೆದು ಕ್ರೀಡೆಯಲ್ಲಿ ಇನ್ನು ಹೆಚ್ಚು ಸಾಧನೆ ಮಾಡಬೇಕಿದ್ದ ಭಟ್ಕಳದ ಯುವ ಪ್ರತಿಭೆ ಖ್ಯಾತ ಕಬ್ಬಡಿ ಆಟಗಾರಾದ ಮನೋಜ್ ನಾಯ್ಕ್ ಅವರು ಇಂದು ನಮನ್ನೆಲ್ಲ ಅಗಲಿದ ಸುದ್ದಿ ತಿಳಿದು ಮನಸ್ಸಿಗೆ ತುಂಬಾನೇ ದುಃಖವೆನಿಸಿದೆ.
ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಿ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾಥಿಸುತ್ತೇನೆ.