ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಸಿಕೊಂಡಿದ್ದ ಆರೋಪಿ ಬಂಧನ
ಕುಮಟಾ 2011ರಿಂದ ಸಿದ್ದಾಪುರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಸಿಕೊಂಡಿದ್ದ ಅಪರಾಧ ಪ್ರಕರಣಕ್ಕೆ ಸಂಬoಧಿಸಿದ ಅಬ್ದುಲ್ ಶುಕೂರ್ ಖಾನ್‌ನನ್ನು ಇಂದು ಕುಮಟಾ ತಾಲೂಕಿನ ಸಂತೆಗುಳಿಯಲ್ಲಿ ಸಿದ್ದಾಪುರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಬದ್ರಿನಾಥ್, ಶಿರಸಿ ಡಿವೈಎಸ್ಪಿ ರವಿ ಡಿ.ನಾಯ್ಕ ಮಾರ್ಗದರ್ಶನದಲ್ಲಿ ಸಿದ್ದಾಪುರ ಸಿಪಿಐ ಕುಮಾರ್ ಕೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಮಂಜೇಶ್ವರ್ ಚಂದಾವರ, ಮಹಾಂತಪ್ಪ ಕುಂಬಾರ್, ಸಿಬ್ಬಂದಿಗಳಾದ ಗಂಗಾಧರ್ ಹೊಂಗಲ್, ರಮೇಶ್ ಕೂಡಲ, ರವಿ ಜೆ.ನಾಯ್ಕ ಪಾಲ್ಗೊಂಡಿದ್ದರು.
ಮಂಗಳವಾರ ಶೇ. 0.9 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಶೇ. 0.9 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಂತೆ ಕಳೆದ ಎರಡು ದಿನದ ಅವಧಿಯ ಸೋಮವಾರದಂದು ಶೇ.0.87 ಹಾಗೂ ರವಿವಾರ ಶೇ. 0.78ರಷ್ಟು ಪಾಸಿಟಿವಿಟಿ ದಾಖಲಾಗಿತ್ತು.
ಸಂಕಷ್ಟದ ಬದುಕು ಸಾಗಿಸುತ್ತಿದ್ದ ವೃದ್ಧೆಯೋರ್ವಳ ನೆರವಿಗೆ ನಿಂತ ಶ್ರೀ ಸತ್ಯಸಾಯಿ ಸೇವಾ ಸಮಿತಿ
ಕುಟುಂಬ ಸದಸ್ಯರಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿದ್ದ ವೃದ್ಧೆಯೋರ್ವಳ ನೆರವಿಗೆ ತಾಲ್ಲೂಕಿನ ಚೆಂಡಿಯಾದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ಊರನಾಗರಿಕರು ಮುಂದಾಗಿದ್ದು, ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ತಾಲೂಕಿನ ಚೆಂಡಿಯಾ ಗ್ರಾಮದ ಸುಬ್ರಮಣ್ಯನಗರದ ಪಾರ್ವತಿ ಮಹಾಬಲೇಶ್ವರ ಮಹಾಲೆ ಮುರುಕು ಮನೆಯಲ್ಲಿ ವಾಸಮಾಡುತ್ತಿದ್ದರು.
ಮನೆಯ ಒಂದು ಭಾಗ ಈಗಾಗಲೇ ಮಳೆಗೆ ಕುಸಿದು ಬಿದ್ದಿದ್ದು, ಇದ್ದ ಸ್ವಲ್ಪ ಭಾಗದ ಗೋಡೆ ಕೂಡ ಕುಸಿಯುವ ಹಂತದಲ್ಲಿತ್ತು. ಆದರೆ ಗಂಡ ಮತ್ತು ಎರಡು ಗಂಡು ಮಕ್ಕಳನ್ನು ಕಳೆದುಕೊಂಡಿದ್ಧ ವೃದ್ದೆ ಅಸಹಾಯಕಳಾಗಿದ್ದಳು. ಆದರೆ ಈ ಬಗ್ಗೆ ತಿಳಿದ ಚೆಂಡಿಯಾದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಸದಸ್ಯರು ಸಹಾಯ ಮಾಡಲು ಮುಂದಾಗಿದ್ದರು. ಸಮಿತಿಯವರು ಬಡ ವೃದ್ಧಿಗೆ ಮನೆ ಕಟ್ಟಿಕೊಡುವುದನ್ನು ತಿಳಿಸಿದು ಪ್ರೇರಣೆಗೊಂಡ ಊರಿನ ನಾಗರಿಕರು ಕೂಡ ಸಹಾಯಕ್ಕೆ ಮುಂದಾಗಿದ್ದು, ಸುಮಾರು 2. 50 ಲಕ್ಷ ವೆಚ್ಚದಲ್ಲಿ ಹಳೆ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಲು ಮಂಗಳವಾರ ಚಾಲನೆ ನೀಡಿದ್ದಾರೆ.