ಶಿರಸಿ: ತಾಲೂಕಿನ ಸರನ್ಗದ್ದೆಯಲ್ಲಿ ಮನೆಯ ಛಾವಣಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಮಂಗಳವಾರ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಉರಗ ತಜ್ಞ ಪ್ರಶಾಂತ ಹುಲೇಕಲ್ ಮನೆಯ ಮಾಡಿನ ಹಂಚಿನಡಿ ಸೇರಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಸಾಹಸದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಹಿಡಿದರು. ನಂತರ ಶಿವಗಂಗಾ ಫಾಲ್ಸ್ ಬಳಿಯ ನಿರ್ಜನ ಪ್ರದೇಶದ ರಕ್ಷಿತಾರಣ್ಯದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

RELATED ARTICLES  ನಾಪತ್ತೆಯಾಗಿರುವ ಬೋಟ್ ನಲ್ಲಿದ್ದ ಸತೀಶ್ ಈಶ್ವರ ಹರಿಕಂತ್ರ ಮನೆಗೆ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭೇಟಿ.

ಈ ಸಂದರ್ಭದಲ್ಲಿ ಹುಲೇಕಲ್ ವಲಯ ಆರ್.ಎಫ್.ಒ. ಮಂಜುನಾಥ ಹೆಬ್ಬಾರ, ಡಿವೈಆರ್.ಎಫ್.ಒ. ರಾಘವೇಂದ್ರ ಹೆಗಡೆ, ಅರಣ್ಯ ರಕ್ಷಕ ರಾಜೇಶ ನಾಯ್ಕ, ದಾವಲಸಾಬ ಎರಗಟ್ಟಿ, ವಾಹನ ಚಾಲಕ ನಾಗರಾಜ ಉಪಸ್ಥಿತರಿದ್ದರು.

RELATED ARTICLES  ಸಂಪನ್ನವಾದ ಕರ್ಕಿ ವಲಯದ ಪಾಕೋತ್ಸವ!