ಕರ್ನಾಟಕ ಸರ್ಕಾರವು ರಾಷ್ಟ್ರಕವಿ ಕುವೆಂಪು ವಿರಚಿತ ಭಾರತ ಜನನಿಯ ತನುಜಾತೆ ನಾಡ ಗೀತೆಗೆ  ಸಾರ್ವತ್ರಿಕವಾಗಿ ಒಂದೇ ದಾಟಿಯನ್ನು  ನಿಗದಿಪಡಿಸಲು ಸನ್ನದ್ಧರಾದ ಈ ಸಂದರ್ಭದಲ್ಲಿ ನಮ್ಮ ಮನವಿ ಏನೆಂದರೆ ಈಗಾಗಲೇ ನಮ್ಮ ನಿನಾದದಿಂದ ಜಿಲ್ಲೆಯ ಹಲವು  ಶಾಲಾ ಮಕ್ಕಳಿಗೆ ನಾಡಿನ ಖ್ಯಾತ ಸಂಗೀತ ಸಂಯೋಜಕ ಡಾ.ಸಿ ಅಶ್ವತ್ ಅವರ ಸಂಯೋಜನೆಯಲ್ಲಿನ ದಾಟಿಯಲ್ಲಿ ತರಭೇತಿ ನೀಡಿರುತ್ತೇವೆ. ಅನೇಕ ಸುಗಮ ಸಂಗೀತ ಶಿಬಿರ ಹಾಗೂ ಕಾರ್ಯಕ್ರಮ ಸಭೆ ಸಮಾರಂಭಗಳಲ್ಲಿಯೂ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಗಳಲ್ಲೂ  ಸಾರ್ವಜನಿಕ ಸ್ಥಳಗಳಲ್ಲಿಯೂ ಕೂಡ ಇದೇ ಧಾಟಿಯಲ್ಲಿ ನಾಡಗೀತೆಯನ್ನು ಹಾಡುತ್ತಾ ಬಂದಿರುತ್ತೇವೆ.ಸುಲಭ ಹಾಗೂ ಸುಲಲಿತವಾದ ಈ ದಾಟಿಯು ನಮ್ಮ ನಿನಾದ ದಿಂದ ಹಾಡಲಾಗಿ ಒಪ್ಪಿತವೂ ಆಗಿರುತ್ತವೆ. ಅನೇಕ ದಿಗ್ಗಜ ಗಾಯಕರು ಸಹ ಈ ಸಂಯೋಜನೆಯಲ್ಲಿಯೇ ಹಾಡುತ್ತಾ ಬಂದಿರುತ್ತಾರೆ.ಸುಲಭವಾಗಿ ಸಂಗೀತ ಕಲಿಯದವರು ಈ ದಾಟಿಯಲ್ಲಿ ಹಾಡಬಹುದಾಗಿದ್ದು ಎಲ್ಲರಿಗೂ ಒಪ್ಪುವ ಸರಳ ದಾಟಿ ಇದಾಗಿದೆ. ಕಾರಣ ನಾಡಗೀತೆಗೆ ಸರ್ಕಾರ   ಸಿ ಅಶ್ವತ್ ಅವರ ಸಂಯೋಜನೆಯನ್ನೇ  ಅಧಿಕೃತ ಗೊಳಿಸಬೇಕೆಂದು  ನಿನಾದ ಸಾಹಿತ್ಯ ಸಂಗೀತ ಸಂಚಯದ ಪರವಾಗಿ ಸಂಚಾಲಕ ಉಮೇಶ ಮುಂಡಳ್ಳಿಯವರು  ಸರ್ಕಾರವನ್ನು ಕೋರಿರುತ್ತಾರೆ

RELATED ARTICLES  ಮರಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು.