ಭಟ್ಕಳ : ಇನ್ನೆಯ ದಿನ ಹೃದಯಾಘಾತದಿಂದ ಕುಂದಾಪುರದ ಆಸ್ಪತ್ರೆಯಲ್ಲಿ ಮೃತ ಕಬಡ್ಡಿ ಆಟಗಾರ ಮನೋಜ ನಾಯ್ಕ ಮೃತ ದೇಹದ ಅಂತಿಮ ದರ್ಶನಕ್ಕೆ ಮೂಡ ಭಟ್ಕಳ ಬೈಪಾಸ್ ನಲ್ಲಿ ಇಂದು ಅನುವು ಮಾಡಿಕೊಡಲಾಯಿತು.
ಮೃತ ದೇಹದ ಅಂತಿಮ ದರ್ಶನಕ್ಕೆ ಸಾರ್ವಜನಿಕರಗೆ ಅನುವು ಮಾಡಿಕೊಡಲಾಗಿ ಈ ಸಂದರ್ಭದಲ್ಲಿ ಮೂಢಭಟ್ಕಳ ಬೈಪಾಸ್ ಸಮೀಪ ಸಕಲ ಸಿದ್ಧತೆ ನಡೆಸಲಾಗಿತ್ತು. ಮೃತ ಕ್ರೀಡಾಳುವಿನ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಜಮಾಯಿಸಿದ್ದರು.
ಆಂಬ್ಯುಲೆನ್ಸ್ ಮೂಲಕ ಮೃತ ದೇಹವನ್ನು ಕುಂದಾಪುರ ಆಸ್ಪತ್ರೆಯಿಂದ ಕರೆದಂದು ಅಂತಿಮ ದರ್ಶನಕ್ಕೆ ಇರಿಸಲಾಯಿತು. ಈ ವೇಳೆ ತನ್ನ ನೆಚ್ಚಿನ ಆಟಗಾರನ ಅಂತಿಮ ದರ್ಶನ ಪಡೆದ ಆತನ ಬಂಧು-ಬಳಗದವರು ಹಾಗೂ ಸ್ನೇಹಿತರು ಮೃತ ದೇಹದ ಮುಂದೆ ಕಣ್ಣೀರಿಟ್ಟರು. ನಂತರ ಮೃತ ದೇಹವನ್ನು ಮೃತನ ಸ್ವಗ್ರಹಕ್ಕೆ ಕರೆದೊಯ್ದು ವಿಧಿ ವಿಧಾನ ನೆರವೇರಿಸಿ ಮುಟ್ಟಳ್ಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಈ ವೇಳೆ ಕುಮಟಾದ ಸೂರಜ್ ನಾಯ್ಕ ಸೋನಿ ಹಾಗೂ ಇತರ ಪ್ರಮುಖರು ಕೂಡ ಮೃತನ ಅಂತಿಮ ದರ್ಶನ ಪಡೆದುಕೊಂಡರು. ಮೃತನು ತಾಯಿ, ಮೂವರು ಸಹೋದರಿ, ಓರ್ವ ಸಹೋದರ ಸೇರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.