ಕಾರವಾರ: ಜಿಲ್ಲೆಯ ಪ್ರವಾಸಿ ಸ್ಥಳಗಳು ಮತ್ತೆ ತೆರೆದುಕೊಳ್ಳುತ್ತಿದ್ದು, ಕಾರವಾರ ಕಡಲತೀರ ಸೇರಿದಂತೆ ಕಾರವಾರ, ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆ ಆರಂಭಿಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಉತ್ತರಕನ್ನಡದ ಕಾರವಾರ, ಭಟ್ಕಳದ ಮುರುಡೇಶ್ವದ ಕಡಲ ತೀರದಲ್ಲಿ ವಾಟರ್ ಬೋಟ್ ರೈಡಿಂಗ್ ಸೇರಿದಂತೆ ವಿವಿಧ ಜಲಕ್ರೀಡೆಗಳು ಜನರ ಗಮನ ಸೆಳೆದಿದ್ದವು. ಭಟ್ಕಳದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ದೇಶದೆಲ್ಲೆಡೆ ಪ್ರಖ್ಯಾತಿ ಪಡೆದಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಈ ಎಲ್ಲ ಜಲಸಾಹಸ ಕ್ರೀಡೆಗಳು ಮಂಕಾಗಿದ್ದವು.

RELATED ARTICLES  ಬ್ಲಾಕ್ ಕಾಂಗ್ರೆಸ್ ಕುಮಟಾದ ಕಛೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆ ಆಚರಣೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣದ ನಿಯಂತ್ರಣಕ್ಕೆ ಬೇರೆ ರಾಜ್ಯ, ಜಿಲ್ಲೆಯಿಂದ ಉತ್ತರ ಕನ್ನಡಕ್ಕೆ ಬರುವ ಪ್ರವಾಸಿಗರ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿತ್ತು. ಸದ್ಯ ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವಿಟಿ ದರ 1 ಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಹಲವು ಸಾರ್ವಜನಿಕ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ತೆರವು ಮಾಡಲಾಗಿದ್ದು, ಜಲಸಾಹಸ ಕ್ರೀಡೆ ಆರಂಭಿಸಲು ಅನುಮತಿ ನೀಡಲಾಗಿದೆ.

ಬೇರೆ ರಾಜ್ಯ, ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರು ಆಗಮಿಸಿದರೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದ್ದುದರಿಂದ, ಲಾಕ್ ಡೌನ್ ಅವಧಿಯ ಬಳಿಕವೂ ಜಿಲ್ಲೆಯ ಪ್ರವಾಸಿ ತಾಣಗಳು ಬರಿದಾಗಿದ್ದವು. ಅಂತೆಯೇ ಜಲಸಾಹಸ ಕ್ರೀಡೆಯನ್ನು ಸಹ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ಪಕ್ಕದ ಮಹಾರಾಷ್ಟ್ರ ಹಾಗೂ ಇನ್ನಿತರ ಪ್ರದೇಶದಿಂದ ಇಲ್ಲಿ ಜಲ ಸಾಹಸ ಕ್ರೀಡೆಯ ಮೋಜು ಪಡೆಯಲು ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಪ್ರವಾಸಕ್ಕೆ ಬರುವವರಿಗೆ ಇದು ಶುಭ ಸುದ್ದಿಗಳು ಎಂದೇ ಹೇಳಬಹುದಾಗಿದೆ.

RELATED ARTICLES  ರಾಜ್ಯಕ್ಕೆ ತೃತೀಯ ಸ್ಥಾನಗಳಿಸಿರುವ ಸಂಜಯ ನಾಯಕ ಮನೆಗೆ ತೆರಳಿ ಗೌರವಿಸಿದ ಮಾಜಿ ಶಾಸಕರು ಹಾಗೂ ಮುಖಂಡರು.