ಶಿರಸಿ: ಕಸದ ಸಮಸ್ಯೆ ನಗರದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ 2016ರಲ್ಲಿ ಹೊಸ ಕಾನೂನು ಜಾರಿಗೆ ತಂದಿದ್ದು, ಸಮರ್ಪಕ ಅನುಷ್ಟಾನಕ್ಕಾಗಿ ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ. ಸೆಪ್ಟೆಂಬರ 11 ರಿಂದ ಶಿರಸಿ ನಗರದ ಜನತೆ ಕಡ್ಡಾಯವಾಗಿ ಹಸಿ ಹಾಗೂ ಒಣ ಕಸ ಬೇರ್ಪಡಿಸಿ ನಗರಸಭೆಯ ಕಸ ಸಂಗ್ರಹಣೆ ವಾಹನಕ್ಕೆ ನೀಡಬೇಕು ಎಂದು ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಕರೆ ನೀಡಿದರು.

ನಗರದ ಮಿನಿ ವಿಧಾನಸೌದದಲ್ಲಿ ಶುಕ್ರವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನು ಮುಂದೆ ಕಸ ವಿಲೇವಾರಿ ಸಮರ್ಪಕವಾಗಿ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈಗಾಗಲೇ ಸಭೆ ನಡೆಸಿ ಸೆಪ್ಟೆಂಬರ 11 ರಿಂದ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಕೊಡುವಂತೆ ಸೂಚನೆ ನೀಡಿದ್ದಾರೆ. ಸ್ವಚ್ಚ ನಗರಕ್ಕಾಗಿ ಶಿರಸಿಯ ಜನತೆ ಇನ್ನು ಮುಂದೆ ಪ್ರತಿ ಮನೆಯಲ್ಲಿ ಎರಡು ಡಬ್ಬ ಇಟ್ಟುಕೊಂಡು ಹಸಿ ಮತ್ತು ಒಣ ಕಸ ಬೇರೆ ಬೇರೆ ಮಡಿಕೊಡಬೇಕು ಎಂದರು.

RELATED ARTICLES  ಕನ್ನಡ ಕಾರ್ತಿಕ: ಮಕ್ಕಳ ಕವಿಗೋಷ್ಠಿ

ನಗರಸಭೆಯ ಪೌರಾಯುಕ್ತ ಮಹೇಂದ್ರಕುಮಾರ ಮಾತನಾಡಿ, ಹಸಿ ಕಸ ಹಾಗೂ ಒಣ ಕಸ ಪ್ರತ್ಯೇಕಿಸಿ ಕೊಡುವ ಕುರಿತು ನಗರಸಭೆಯಿಂದ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ಸೆಪ್ಟೆಂಬರ 11 ರಿಂದ ನಗರದ ಜನತೆ ಗೊಬ್ಬರವಾಗಿಸುವ ಹಸಿ ಕಸ ಹಾಗೂ ಕೊಳೆಯದ ಒಣ ಕಸವನ್ನು ಬೇರೆ ಬೇರೆಯಗಿ ನೀಡಬೇಕು. ವಿಂಗಡಿಸಿ ಕೊಡದಿದ್ದರೇ ನಗರಸಭೆಯ ಸಿಬ್ಬಂದಿ ಕಸ ಕೊಂಡೊಯುವುದಿಲ್ಲ. ಕಸ ಒಯ್ಲಿಲ್ಲ ಎಂದು ರಸ್ತೆ ಬದಿ ಯಾರದರೂ ಹಾಕಿದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಕಾನೂನಿನ ಪ್ರಕಾರ ಕಸವನ್ನು 28 ವಿಧದದಲ್ಲಿ ಪ್ರತ್ಯೇಕಿಸಿ ಹಾಕಬೇಕೆಂದಿದೆ. ಶಿರಸಿಯಲ್ಲಿ ಸದ್ಯ 2 ವಿಧದಲ್ಲಾದರೂ ವಿಂಗಡಿಸಿ ಕಸ ವಿಲೇವಾರಿ ಮಾಡಬೇಕಿದೆ. ಈ ಸಾರ್ವತ್ರಿಕ ಕಾರ್ಯಕ್ಕೆ ನಗರದ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವ ಮೂಲಕ ಸ್ವಚ್ಚ ಶಿರಸಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

RELATED ARTICLES  ಓವರ್‌ಟೇಕ್ ಮಾಡಲು ಹೋಗಿ ಬಸ್ ಕೆಳಗೆ ಬಿದ್ದು ಸವಾರ ಸವಾರ‌ ಸಾವು.

ಈ ವೇಳೆ ನಗರಸಭೆ ಅಧ್ಯಕ್ಷೆ ಅರುಣಾ ವೆರ್ನೇಕರ್, ತಹಶೀಲ್ದಾರ ಬಸಪ್ಪ ಪೂಜಾರಿ, ನಗರಸಭೆಯ ಸದಸ್ಯರಾದ ರವಿ ಚಂದಾವರ, ಮೊಹಿನಿ ಬೈಲೂರ, ರಾಚಪ್ಪ ಜೋಗಳೇಕರ್, ಯಶವಂತ ಮರಾಠೆ, ಜಗದೀಶ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.