ಕುಮಟಾದಲ್ಲಿ ನಾಳೆ 2590 ಕೋವೀಶೀಲ್ಡ್ ಹಾಗೂ 240 ಕೋವ್ಯಾಕ್ಸೀನ್ ಲಸಿಕೆ ಲಭ್ಯವಿರುವುದಾಗಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಕೋವ್ಯಾಕ್ಸೀನ್ ಲಸಿಕೆ ಲಭ್ಯವಿದ್ದು ಉಳಿದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಕೊವಿಶಿಲ್ಡ ಲಸಿಕೆ ಲಭ್ಯವಿದೆ.
ವಿವರ ಇಲ್ಲಿದೆ.
ಯಲ್ಲಾಪುರದಲ್ಲಿ ಎಲ್ಲೆಲ್ಲಿ?
ಯಲ್ಲಾಪುರ ತಾಲೂಕಿನಲ್ಲಿ ಶುಕ್ರವಾರ 500 ಡೋಸ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ಪಡೆದುಕೊಳ್ಳುವವರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 500 ಡೋಸ್ ಲಸಿಕೆಯನ್ನು ತಾಲೂಕಾಸ್ಪತ್ರೆ ಯಲ್ಲಾಪುರದಲ್ಲಿ 200, ವಜ್ರಳ್ಳಿ 150, ಕಳಚೆ 50, ಮಲವಳ್ಳಿಯಲ್ಲಿ 100 ಡೋಸ್ ಲಸಿಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ.