ಹೊನ್ನಾವರ : ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಡಶಾಲೆ ಕರ್ಕಿಯ ಮುಖ್ಯಾದ್ಯಪಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್.ಎಂ.ಹೆಗಡೆ ಅವರು ಮುಖ್ಯಾದ್ಯಾಪಕರುಗಳ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಗುಡ್ಡೇದಹಳ್ಳಿಯಲ್ಲಿರುವ ಮುಖ್ಯಾದ್ಯಾಪಕರುಗಳ ರಾಜ್ಯ ಸಂಘದ ಕೇಂದ್ರಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಉತ್ತರಕನ್ನಡ ಜಿಲ್ಲಾ ಮುಖ್ಯಾದ್ಯಾಪಕರುಗಳ ಸಂಘದ ಅಧ್ಯಕ್ಷರೂ ಆಗಿರುವ ಎಲ್.ಎಂ.ಹೆಗಡೆ ಅವರು ಕರ್ನಾಟಕ ರಾಜ್ಯ ಮುಖ್ಯಾದ್ಯಾಪಕರುಗಳ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

RELATED ARTICLES  ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ ಕವಲಕ್ಕಿ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಕವಲಕ್ಕಿ

ಎಲ್.ಎಂ.ಹೆಗಡೆ ಅವರು ಹೊನ್ನಾವರ ತಾಲೂಕಿನ ಗುಣವಂತೆ ಕೆರೆಮನೆಯವರಾಗಿದ್ದು ಮಾದರಿ ಶಿಕ್ಷಕರಾಗಿ ತಾಲೂಕಿನಲ್ಲಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಶಿಕ್ಷಕರ ಸಂಘಟನೆಯಲ್ಲಿ ಸಕ್ರೀಯವಾಗಿರುವ ಇವರು ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರ ಸಮಸ್ಯೆಗಳ ಬಗ್ಗೆ, ಮುಖ್ಯಾದ್ಯಾಪಕರ ಕುಂದು ಕೊರತೆಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಅನುಭವ ಮತ್ತು ಸಾಮರ್ಥ್ಯವನ್ನು ಹೊಂದಿದ್ದಾರೆ.

RELATED ARTICLES  ಸಾಧನೆ ಮಾಡಿದ ವಿಂದ್ಯಾ ದ್ವಯರು : ಅಭಿನಂದನೆಗಳು

ಎಲ್.ಎಂ.ಹೆಗಡೆ ಅವರು ಮುಖ್ಯಾದ್ಯಾಪಕರುಗಳ ರಾಜ್ಯ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಕರ್ನಾಟಕ ರಾಜ್ಯ ಮಾದ್ಯಮಿಕ ಶಾಲಾ ನೌಕರರ ಸಂಘದವರು ಅಭಿನಂದಿಸಿದ್ದಾರೆ.