ಕುಮಟಾ : ಮೊನ್ನೆ ತಿಂಗಳಿನ ನಾಲ್ಕನೇಯ ಗುರುವಾರದಂದು ಹೊನ್ನಾವರ ಮತ್ತು ಭಟ್ಕಳ ತಾಲೂಕಾ ಸರಕಾರೀ ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಡೆದ ತಪಾಸಣಾ ಶಿಬಿರಗಳಲ್ಲಿ ಆಯ್ಕೆಯಾದ ಅಂತೂ 29 ಅರ್ಹ ಬಡ ವೃದ್ಧರಿಗೆ ನಿನ್ನೆ ಶುಕ್ರವಾರ ಕುಮಟಾದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ ಯಲ್ಲಿ ಯಶಸ್ವಿಯಾಗಿ ಮೋತಿಬಿಂದು (ಕಣ್ಣುಪೊರೆ) ಶಸ್ತ್ರಚಿಕಿತ್ಸೆ ನಡೆಸಿ, ಇಂದು (ಶನಿವಾರ)ಬೆಳಿಗ್ಗೆ ಈ ಎಲ್ಲ ಫಲಾನುಭವಿಗಳನ್ನು ಆಸ್ಪತ್ರೆಯಿಂದ ಗೌರವ- ಪ್ರೀತ್ಯಾದರಗಳಿಂದ ಬೀಳ್ಕೊಟ್ಟು ಆಸ್ಪತ್ರೆಯ ವಾಹನದ ಮೂಲಕ ಹೊನ್ನಾವರ ಮತ್ತು ಭಟ್ಕಳ ಕ್ಕೆ ಸುರಕ್ಷಿತವಾಗಿ ಕರೆದೊಯ್ಯಲಾಯಿತು. ಎಂದಿನಂತೆ ಶಿಬಿರದ ಈ ಎಲ್ಲ ಫಲಾನುಭವಿಗಳ ತಪಾಸಣೆ, ಶಸ್ತ್ರಚಿಕಿತ್ಸೆ, ವಸತಿ, ಊಟೋಪಚಾರ,ವಾಹನ ವ್ಯವಸ್ಥೆ ಇವೆಲ್ಲವೂ ಸಂಪೂರ್ಣ ಉಚಿತವಾಗಿತ್ತು (ಶಿಬಿರಗಳ ಕುರಿತಾದ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 08386 224480/9448302509)

RELATED ARTICLES  ಚರ್ಚಿತವಾಯ್ತು “ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಅನಿವಾರ್ಯವಲ್ಲ” ವಿಷಯ.