ದಾಂಡೇಲಿ: ಹಳೆದಾಂಡೇಲಿಯಲ್ಲಿರುವ ಸಂತ ಅಂತೋನಿ ಚರ್ಚ ಎದುರುಗಡೆಯ ಖಾಲಿ ಪ್ರದೇಶವೊಂದರಲ್ಲಿ ಮಾಂಸದ ತ್ಯಾಜ್ಯಗಳನ್ನು ಎಸೆಯಲಾಗಿದ್ದು, ಇದರಿಂದ ಚರ್ಚ ಮತ್ತು ಅದರ ಸುತ್ತ ಮುತ್ತಲ ಪ್ರದೇಶಗಳಲ್ಲಿ ತಡೆಯಲಾರದಷ್ಟು ದುರ್ವಾಸನೆ ಬರುತ್ತಿದೆ. ಇದನ್ನು ತಕ್ಷಣ ಸ್ವಚ್ಚಗೊಳಿಸಬೇಕೆಂದು ಒತ್ತಾಯಿಸಿ ನೂರಾರು ಜನರು ನಗೆಸಭೆಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿ ಪೌರಾಯುಕ್ತರಿಗೆ ಮನವಿ ನೀಡಿದರು.
ಹಿಂದೆ ಮನವಿ ಮಾಡಿದರೂ ಕ್ರಮ ಕೈಗೊಳಗಳದ ಹಿನ್ನಲೆಯಲ್ಲಿ ಚರ್ಚನ ಭಕ್ತರು ಹಾಗೂ ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಚರ್ಚ ಬಳಿಯೇ ಮಾಂಸದ ತುಂಡುಗಳು, ಚರ್ಮ ಹಾಗೂ ಇನ್ನಿತರೆ ತ್ಯಾಜ್ಯಗಳನ್ನು ಎಸೆಯುತ್ತಿರುವ ಬಗ್ಗೆ, ಈ ಬಗ್ಗೆ ನಗರಸಭೆಯ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು. ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಂತರ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ಪೌರಾಯುಕ್ತ ಆರ್.ವಿ. ಜತ್ತಣ್ಣ, ಮೇಲ್ವಿಚಾರಕ ಸತೀಶ ಗೋಸಾವಿ, ಆರೋಗ್ಯ ನಿರೀಕ್ಷಕ ಸತೀಶ ಗೋಸಾವಿ, ನಗರಸಭಾ ಸದಸ್ಯ ರವಿ ಸುತಾರ ಮುಂತಾದವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಹಾಗೂ ಅಲ್ಲಿ ಹೊಂಡವೊಂದರಲ್ಲಿ ಹಾಕಿಟ್ಟಿದ್ದ ಮಾಂಸದ ತ್ಯಾಜ್ಯಗಳನ್ನು ತಕ್ಷಣ ತೆರವುಗೊಳಿಸಿ, ಸಂಬಂದಪಟ್ಟವರಿಗೆ ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಚರ್ಚನ ಪಾದರ ಇಗ್ನೇಶಿಯಸ್ ಡಿಸೋಜಾ, ಪ್ರಮುಖರಾದ ಸಿನೆಸ್ತ ಫರ್ನಾಂಡೀಸ್, ಜೋನಿ ಡಿಸೋಜಾ, ಜೆಮ್ಸ್, ಮಾರಿಯಾ ಡಿಸೋಜಾ ಮುಂತಾದವರಿದ್ದರು.

RELATED ARTICLES  ಕುಮಟಾ ಕನ್ನಡ ಸಂಘದ ಜನನುಡಿ ಸಾಹಿತ್ಯ ಸಮ್ಮೇಳನ ನ.30ಕ್ಕೆ : ಸದಾನಂದ ದೇಶಭಂಡಾರಿ