ಕುಮಟಾ : ಕಾಡು ಪ್ರಾಣಿಗಳು ನಾಡಿಗೆ ಬಂದು ಜನತೆಯನ್ನು ಬೆಚ್ಚಿಸುವ ಕಾರ್ಯಗಳು ಆಗಾಗ ನಡೆಯುತ್ತಲೇ ಇದ್ದು, ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿನತ್ತ ಬರುವ ಕಾಡು ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿದೆ. ಇತ್ತೀಚಿಗೆ ಕಿಮಾನಿಯಲ್ಲಿ ಚಿರತೆಯೊಂದು ನಾಯಿ ಹಿಡಿಯಲು ಬಂದು ಬೋನೊಳಗೆ ಬಂಧಿಯಾದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು.
ತಾಲೂಕಿನ ದೇವಗಿರಿ ಗ್ರಾಪಂನ ಹೊಳೆಗದ್ದೆಯ ಜನವಸತಿ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸ್ಥಳೀಯ ಗ್ರಾಮಸ್ಥರು ಆತಂಕಗೊಳ್ಳುವoತಾಗಿದೆ. ಸಂಜೆ ಹೊತ್ತಿಗೆ ಆ ಭಾಗದಲ್ಲಿ ಓಡಾಡಲು ಗ್ರಾಮಸ್ಥರು ಭಯಪಟ್ಟುಕೊಳ್ಳುವಂತಾಗಿದೆ.
ಈ ಕುರಿತು ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಚಿರತೆಯ ಹೆಜ್ಜೆಯ ಗುರುತನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆ ಭಾಗದ ಕೆಲವಡೆ ಸಿಸಿ ಕ್ಯಾಮರಾ ಅಳವಡಿಸಿದ ಮಾಹಿತಿ ಇದೆ. ಒಟ್ಟಾರೆ ಚಿರತೆಯ ಹೆಜ್ಜೆ ಗುರುತು ಈಡೀ ಗ್ರಾಮದಲ್ಲಿ ದೊಡ್ಡ ಸುದ್ದಿಯಾಗಿದೆ.