ಶಿರಸಿ : ನಿನ್ನೆ ಮೊಬೈಲ್‌ಗೆ ಕರೆನ್ಸಿ ಹಾಕಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದ ವ್ಯಕ್ತಿ ನಾಪತ್ತೆಯಾದ‌ ಬಗ್ಗೆ ವರದಿಯಾಗಿತ್ತು. ಇಂದು ಅದೇ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ.

ಶಿರಸಿ ತಾಲೂಕಿನ ಪಡ್ತಿಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಬಳಕೆಯಿಲ್ಲದ ನಿವೇಶದಲ್ಲಿದ್ದ ತೆರೆದ ಬಾವಿಯಲ್ಲಿ ಶವ ತೇಲುತ್ತಿದ್ದು, ತೀವ್ರ ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದು, ಮೃತ ವ್ಯಕ್ತಿ ಸಿದ್ದಾಪುರ ಮೂಲದ ಪುಂಡಲೀಕ ಅಂಬಿಗ ಎಂದು ತಿಳಿದುಬಂದಿದೆ. ಕಾಣೆಯಾದ ಮಗನನ್ನು ಹುಡುಕಿಕೊಡುವಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

RELATED ARTICLES  ಫೆ.2 ಮತ್ತು 3ರಂದು ನಡೆಯುವ ಕದಂಬೋತ್ಸವದ ಪ್ರಯುಕ್ತ ಸಾಕ್ಷ್ಯ ಚಿತ್ರ ಹಾಗೂ ಅನಾನಸ್ ಮೇಳ