ಶಿರಸಿ : ಕುಲ್ಲಕ ಕಾರಣಕ್ಕೆ ಗಂಡಹೆಂಡತಿ ಜಗಳ ಮಾಡಿಕೊಂಡು ಇದರಿಂದ ಮಾನಸಿಕವಾಗಿ ನೋವು ಅನುಭವಿಸಿದ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ಗಣೇಶನಗರದ ಅರಣ್ಯಪ್ರದೇಶದಲ್ಲಿ ಇಂದು ನಡೆದಿದೆ. ಸಲೀಂ ಶೃಂಗೇರಿ (32) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.

RELATED ARTICLES  ನಾಟ್ಯೋತ್ಸವದ ಐದನೇ ದಿನದ ಕಾಯಕ್ರಮಗಳು..

ಕಳೆದ ಹಲವು ದಿನಗಳಿಂದ ಕುಡಿತದ ದಾಸನಾಗಿದ್ದ ಈತ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಮನನೊಂದ ಈ ವ್ಯಕ್ತಿ ಹೆಂಡತಿಯೊಂದಿಗೆ ಜಗಳವಾಡಿ ನಂತರ ಮನೆಯ ಸಮೀಪದ ಅರಣ್ಯ ಪ್ರದೇಶವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸ್.ಐ. ಈರಯ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES  "ಗೋಸ್ವರ್ಗ"ದಲಿ ದಣಿವರಿಯದ ಧಣಿ!